ಪತ್ನಿಗೆ ವಂಚಿಸಿ ಪ್ರೇಯಸಿಯೊಂದಿಗೆ ಪಲ್ಲಂಗದಲ್ಲಿದ್ದಾಗಲೇ ಟೆಕ್ಕಿ ಪೊಲೀಸ್ ಬಲೆಗೆ


ಬೆಂಗಳೂರು: ಪತ್ನಿಗೆ ವಂಚಿಸಿ ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿ ಪತಿಯನ್ನು ಬೆಂಗಳೂರು ಪೊಲೀಸರು ಪ್ರೇಯಸಿಯೊಂದಿಗೆ ಪಲ್ಲಂಗದಲ್ಲಿದ್ದಾಗಲೇ ಬಂಧಿಸಿದ್ದಾರೆ.

ಪತ್ನಿಗೆ ಜಾತಿ ನಿಂದನೆ ಮಾಡಿ, ಹಲ್ಲೆ ಮತ್ತು ಮಾನಸಿಕ ಕಿರುಕುಳ ನೀಡಿರುವ ಆರೋಪದಲ್ಲಿ ಟೆಕ್ಕಿ ಜೆಡ್ರೆಲಾ ಜಾಕೂಬ್ ಆರೂಪ್​​ನನ್ನು ಬೆಂಗಳೂರು ಡಿಸಿಆರ್‌ಇ ಪಶ್ಚಿಮ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಜಾಕೂಬ್ ತನ್ನ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ. ಪತ್ನಿ ಖಾಸಗಿ ಸಂಸ್ಥೆಯಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಕೆ ಲಕ್ಷಾಂತರ ರೂ. ಸಂಬಳ ಪಡೆಯುತ್ತಿದ್ದರು. ಆದರೆ, ಜಾಕೂಬ್‌ಗೆ ಉದ್ಯೋಗವಿಲ್ಲದ ಹಿನ್ನೆಲೆಯಲ್ಲಿ ಪತ್ನಿ ತನ್ನ ಕೆಲಸವನ್ನೇ ಬಿಟ್ಟುಕೊಟ್ಟು, ಪತಿಗೆ ಉದ್ಯೋಗ ಸಿಗುವಂತೆ ಸಹಾಯ ಮಾಡಿದ್ದರು ಎನ್ನಲಾಗಿದೆ.


ಆದರೆ ಮಗುವಾದ ಬಳಿಕ ಜಾಕೂಬ್ ಪತ್ನಿಗೆ ಜಾತಿ ನಿಂದನೆ ನಡೆಸಿ, ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೆ ಗರ್ಭಪಾತವಾಗುವ ರೀತಿಯಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖವಾಗಿದೆ.


ಈ ನಡುವೆ ಪತ್ನಿಗೆ ತಿಳಿಯದೆ ಜಾಕೂಬ್ ಮತ್ತೊಬ್ಬ ಯುವತಿಯೊಂದಿಗೆ ಸಹವಾಸ ಬೆಳೆಸಿ, ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ಗಳನ್ನು ಮಾಡುತ್ತಿದ್ದ. ಈ ವಿಚಾರ ತಿಳಿದ ಪತ್ನಿ, ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.


ಪತ್ನಿ ನೀಡಿರುವ ದೂರನ್ನು ಆಧರಿಸಿ ಪೊಲೀಸರು ಇಲೆಕ್ಟ್ರಾನಿಕ್ ಸಿಟಿಯ ಪಿಜಿಯೊಂದಕ್ಕೆ ದಾಳಿ ನಡೆಸಿದ್ದಾರೆ‌. ಆಗ ಪ್ರೇಯಸಿಯೊಂದಿಗೆ ಪಲ್ಲಂಗದ ಮೇಲೆಯೇ ಇದ್ದ ಜಾಕೂಬ್ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಬೆಂಗಳೂರು ಡಿಸಿಆರ್‌ಇ ಪಶ್ಚಿಮ ವಿಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.


BREAKING NEWS
Loading latest news...
Join our WhatsApp Channel Powered By : Online Pudu