-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ವಾಟ್ ಹ್ಯಾಪಂಡ್ ಇನ್‌ಸೈಡ್ ಎಂದು ಮೊದಲ ರಾತ್ರಿಯ ವೀಡಿಯೋ ಹಂಚಿಕೊಂಡ ನವದಂಪತಿ

ವಾಟ್ ಹ್ಯಾಪಂಡ್ ಇನ್‌ಸೈಡ್ ಎಂದು ಮೊದಲ ರಾತ್ರಿಯ ವೀಡಿಯೋ ಹಂಚಿಕೊಂಡ ನವದಂಪತಿ


ಮುಂಬೈ: ಸದ್ಯ ನಾವು ಸಾಮಾಜಿಕ ಜಾಲತಾಣ ಎಂಬ ಯುಗದಲ್ಲಿದ್ದೇವೆ ಎಂದೆನಿಸುತ್ತದೆ. ಯಾಕೆಂದರೆ ಎಲ್ಲರಿಗೂ ತಾವು ಫೇಮಸ್ ಆಗಬೇಕು. ಅದಕ್ಕಾಗಿ ಏನೇನೆಲ್ಲಾ ಹುಚ್ಚು ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. 

ಆದರೆ ಇದರಲ್ಲಿ ಇನ್ನೂ ಅಸಹ್ಯಕರವೆಂದರೆ ತಾವು ಪ್ರಸಿದ್ಧರಾಗಬೇಕು ಎನ್ನುವ ಭರದಲ್ಲಿ ಅಸಭ್ಯ ವಿಡಿಯೋ ಮಾಡಿ ಎಕ್ಸ್‌ಪೋಸ್‌ ಮಾಡುತ್ತಿದ್ದಾರೆ. ಬೆಡ್‌ರೂಮಿನಲ್ಲಿ ನಡೆಯುವ ಅತ್ಯಂತ ರಹಸ್ಯ ವಿಚಾರಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಲಾಗುತ್ತಿದೆ. ಇತ್ತೀಚೆಗೆ ವಿವಾಹವಾದ ನವದಂಪತಿ ಜೋಡಿಯೊಂದು ತಮ್ಮ ಪ್ರಥಮ ರಾತ್ರಿಯ ಕೋಣೆಯ ವಿಡಿಯೋವನ್ನು ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

@piyushgothislovekit ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೋ ಪೋಸ್ಟ್ ಮಾಡಲಾಗಿದೆ. ಪಿಯೂಷ್ ಮತ್ತು ನಿಕಿತಾ ಅವರ ಮೊದಲ ರಾತ್ರಿ ಎಂದು ಹೇಳಲಾಗಿದೆ. ಅವರ ಕೋಣೆಯನ್ನು ಬಲೂನ್‌ಗಳು ಮತ್ತು ಇತರ ವಸ್ತುಗಳಿಂದ ಅಲಂಕರಿಸಲಾಗಿದ್ದು, ಪ್ರೀತಿಪಾತ್ರರು, ನವದಂಪತಿಯನ್ನು ಪ್ರೀತಿಯಿಂದ ಕೋಣೆಯೊಳಗೆ ಕಳುಹಿಸುತ್ತಿದ್ದಾರೆ. ಆದರೆ, ವೀಡಿಯೋದಲ್ಲಿ ಒಳಗೆ ಕಳುಹಿಸುವವರ ಮುಖ ಕಾಣುವುದಿಲ್ಲ. ನವದಂಪತಿ ಟಾಟಾ ಮಾಡುವುದು ಮಾತ್ರ ಕಾಣಿಸುತ್ತದೆ. ವಿಡಿಯೋ ಬಾಗಿಲು ಮುಚ್ಚುವುದರೊಂದಿಗೆ ಪ್ರಾರಂಭವಾಗಿ, ಕೊಣೆಯೊಳಗಿನ ಕೆಲ ದೃಶ್ಯಗಳಿಂದ ಕೊನೆಯಾಗುತ್ತದೆ.

ದಂಪತಿ ಪ್ರಣಯದ ಮೊದಲ ರಾತ್ರಿಯ ವಿಡಿಯೋವನ್ನು ಹಂಚಿಕೊಳ್ಳಲಿಲ್ಲ. ಬದಲಾಗಿ, ವಧು ಸದ್ದಿಲ್ಲದೆ ತನ್ನ ಕೂದಲಿನಿಂದ ತನ್ನ ಆಭರಣಗಳು ಮತ್ತು ಹೂವುಗಳನ್ನು ತೆಗೆಯಲು ಪ್ರಾರಂಭಿಸುತ್ತಾಳೆ. ಆದರೆ, ಎಲ್ಲರ ಗಮನ ಸೆಳೆಯುವುದು ವರನ ಕ್ರಿಯೆಗಳೇ. ಹತ್ತಿರದಲ್ಲಿ ನಿಲ್ಲುವ ಬದಲು, ಅವನು ತನ್ನ ಹೆಂಡತಿಗೆ ಸಹಾಯ ಮಾಡುತ್ತಾನೆ. ವಧುವಿನ ಕಿವಿಯೋಲೆಗಳನ್ನು ತೆಗೆದು ಅವಳ ಬಳೆಗಳನ್ನು ಬಿಚ್ಚಲು ಸಹಾಯ ಮಾಡುತ್ತಾನೆ.

ಈ ವಿಡಿಯೋ ಬೇಗನೆ ವೈರಲ್ ಆಗಿದೆ. ಕೆಲವರು ಇಂತಹ ವಿಡಿಯೋವನ್ನು ಏಕೆ ಪೋಸ್ಟ್ ಮಾಡುತ್ತೀರಾ ಎಂದು ಪ್ರಶ್ನಿಸಿದರೆ, ಕೆಲವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮೊದಲಿಗೆ ನಾನು ಇದು ಕೇವಲ ಮಲಗುವ ಕೋಣೆಯ ಕ್ಲಿಪ್ ಎಂದು ಭಾವಿಸಿದ್ದೆ, ಆದರೆ ಅದು ಪ್ರೀತಿ ಮತ್ತು ಕಾಳಜಿಯ ಪಾಠವಾಗಿ ಪರಿಣಮಿಸಿತು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ