-->
ಈ 10ಪುರಾತನ ಮರಗಳ ಬಗ್ಗೆ ನಿಮಗೆ ತಿಳಿದಿದೆಯೇ?- ಈ ಮರಗಳಲ್ಲೊಂದು ಮಹಾಭಾರತಕ್ಕೂ ಮೊದಲಿನ ಮರ

ಈ 10ಪುರಾತನ ಮರಗಳ ಬಗ್ಗೆ ನಿಮಗೆ ತಿಳಿದಿದೆಯೇ?- ಈ ಮರಗಳಲ್ಲೊಂದು ಮಹಾಭಾರತಕ್ಕೂ ಮೊದಲಿನ ಮರ


ಪ್ರಪಂಚದಲ್ಲಿಯೇ ಅತೀ ಪುರಾತನ 10 ಮರಗಳ ಬಗ್ಗೆ ನಾವು ಈ ಸುದ್ದಿಯಲ್ಲಿ ನಿಮಗೆ ಮಾಹಿತಿ ನೀಡುತ್ತೇವೆ‌. ಈ ಮರಗಳು ಸಾವಿರಾರು ವರ್ಷಗಳಷ್ಟು ಹಳೆಯವು. ಇತಿಹಾಸ ಮತ್ತು ಪರಿಸರದ ಪ್ರಾಮುಖ್ಯತೆಯನ್ನು ಹೊಂದಿವೆ. ಒಂದು ಮರವಂತೂ ಮಹಾಭಾರತಕ್ಕಿಂತಲೂ ಮೊದಲೇ ಇತ್ತು ಎನ್ನಲಾಗಿದೆ.

ಪ್ರತಿ ವರ್ಷ ಜೂನ್ 5ನ್ನು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಗಿಡಗಳನ್ನು ನೆಡುವುದು ಮತ್ತು ಪರಿಸರವನ್ನು ಶುದ್ಧವಾಗಿಡುವುದೇ ಸುದ್ದಿಯ ಉದ್ದೇಶ. ಗಿಡ-ಮರಗಳು ನಮಗೆ ಶುದ್ಧ ಆಮ್ಲಜನಕವನ್ನು ನೀಡುತ್ತದೆ. ಆದ್ದರಿಂದ ಮರಗಳನ್ನು ಪೋಷಿಸುವುದು ಅತ್ಯಗತ್ಯ. ಇಂದು ವಿಶ್ವ ಪರಿಸರ ದಿನದಂದು, ನಾವು ನಿಮಗೆ ವಿಶ್ವದ 10 ಅತ್ಯಂತ ಹಳೆಯ ಮರಗಳ ಬಗ್ಗೆ ಮತ್ತು ಅವುಗಳ ಸ್ಥಳಗಳ ಬಗ್ಗೆ ಹೇಳುತ್ತೇವೆ.

ವಿಶ್ವದ 10 ಅತ್ಯಂತ ಹಳೆಯ ಮರಗಳು ಮತ್ತು ಅವುಗಳ ಸ್ಥಳಗಳು

ಸರ್ವೈವಲಿಸ್ಟ್- ಈ ಮರ ಓಲ್ಡ್ ಟಿಜಿಕೊ ಪ್ರಭೇದಕ್ಕೆ ಸೇರಿದೆ. ಇದು ಸುಮಾರು 9,560 ವರ್ಷ ಹಳೆಯ ಮರ. ಈ ಮರವು ಸ್ವೀಡನ್‌ನ ಫುಲುಫ್ಜೆಲೆಟ್ ಪರ್ವತದಲ್ಲಿದೆ.

ಮೆಥುಸೆಲಾ- ಮೆಥುಸೆಲಾ ಎಂಬ ಮರವೂ ವಿಶ್ವದ ಅತ್ಯಂತ ಹಳೆಯ ಮರಗಳಲ್ಲಿ ಒಂದು. ಇದು ಸುಮಾರು 4,856 ವರ್ಷಗಳಷ್ಟು ಹಳೆಯದು. ಇದು ಯುಎಸ್‌ಎಯ ಕ್ಯಾಲಿಫೋರ್ನಿಯಾ ವೈಟ್ ಮೌಂಟೇನ್‌ನಲ್ಲಿದೆ.

ಪ್ರಮೀತಿಯಸ್- ಪ್ರಮೀತಿಯಸ್ ಮರವು 4,900 ವರ್ಷಗಳಿಗಿಂತ ಹಳೆಯ ಮರ. ಆದರೂ, 1964ರಲ್ಲಿ ಈ ಮರವನ್ನು ಕಡಿಯಲಾಯಿತು. ಈ ಮರವು ವೀಲರ್ ಪೀಕ್, ನೆವಾಡಾ, ಯುಎಸ್‌ಎನಲ್ಲಿದೆ.

ಎಲ್ ಗ್ರ್ಯಾನ್ ಅಬುಲೋ- ಈ ಮರವು ಸುಮಾರು 3,500 ರಿಂದ 5,000ದಷ್ಟು ವರ್ಷ ಹಳೆಯದು ಎಂದು ಅಂದಾಜಿಸಲಾಗಿದೆ. ಇದು ಕಾರ್ಡಿಲ್ಲೆರಾ ಪೆಲಾಡಾ, ಲಾಸ್ ರಿಯೋಸ್, ಚಿಲಿಯಲ್ಲಿದೆ.

ಮೌಚಾವ್‌ನ ಆಲಿವ್ ಮರ- ಮೌಚಾವ್‌ನ ಆಲಿವ್ ಮರವು ಸುಮಾರು 3,350 ವರ್ಷ ಹಳೆಯದು. ಇದು ಪೋರ್ಚುಗಲ್‌ನ ಅಬ್ರಾಂಟೆಸ್, ಮೌರಿಸ್ಕಾಸ್‌ನಲ್ಲಿದೆ.

ಜಯ ಶ್ರೀ ಮಹಾಬೋಧಿ- ಜಯ ಶ್ರೀ ಮಹಾಬೋಧಿ ಒಂದು ಪವಿತ್ರ ಅಂಜೂರದ ಮರ. ಇದು ಸುಮಾರು 2311 ವರ್ಷ ಹಳೆಯ‌ಮರ. ಈ ಮರವನ್ನು ಶ್ರೀಲಂಕಾದ ಅನುರಾಧಪುರದಲ್ಲಿ 288 ಬಿ.ಸಿ.ಯಲ್ಲಿ ನೆಡಲಾಯಿತು.

ಪ್ಯಾಂಕೆ ಬಾವೊಬಾಬ್- ಈ ಮರವು ಸುಮಾರು 2,419 ವರ್ಷ ಹಳೆಯದಾಗಿತ್ತು. ಆದಾಗ್ಯೂ, 2011 ರಲ್ಲಿ ಈ ಮರವು ಸತ್ತಿತು. ಇದು ಜಿಂಬಾಬ್ವೆಯ ಮಾಟಬೆಲೆಲ್ಯಾಂಡ್ ಉತ್ತರದಲ್ಲಿದ

ಜೋಮನ್ ಸುಗಿ- ಜೋಮನ್ ಸುಗಿ ಮರವು ಸುಮಾರು 1,813 ವರ್ಷ ಹಳೆಯದು. ಇದು ಜಪಾನ್‌ನ ಯಕುಶಿಮಾ ದ್ವೀಪದಲ್ಲಿರುವ ಬೃಹತ್ ಸೀಡರ್ ಮರವಾಗಿದೆ.

ಅರ್ಬೋಲ್ ಡೆಲ್ ಟುಲೆ- ಈ ಮರವು ಸುಮಾರು 1,433 ರಿಂದ 1,600 ವರ್ಷ ಹಳೆಯದು ಎಂದು ಅಂದಾಜಿಸಲಾಗಿದೆ. ಇದನ್ನು ಅತ್ಯಂತ ದಪ್ಪ ಕಾಂಡವನ್ನು ಹೊಂದಿರುವ ಮಾಂಟೆಜುಮಾ ಸೈಪ್ರೆಸ್ ಎಂದು ಕರೆಯಲಾಗುತ್ತದೆ. ಇದು ಸಾಂತಾ ಮಾರಿಯಾ ಡೆಲ್ ಟುಲೆ, ಓಕ್ಸಾಕಾ, ಮೆಕ್ಸಿಕೋದಲ್ಲಿದೆ.

ಬೆನೆಟ್ ಜುನಿಪರ್- ಬೆನೆಟ್ ಜುನಿಪರ್ ಮರವು ಸುಮಾರು 2,200 ವರ್ಷ ಹಳೆಯದು. ಇದು ಸಿಯೆರಾ ನೆವಾಡಾ, ಕ್ಯಾಲಿಫೋರ್ನಿಯಾ, ಯುಎಸ್‌ಎನಲ್ಲಿದೆ.

Ads on article

Advertise in articles 1

advertising articles 2

Advertise under the article