ಅಪರೂಪಕ್ಕೊಮ್ಮೆ ಮದ್ಯಸೇವನೆ ಮಾಡುವುದು ಒಳ್ಳೆಯದ್ದೋ, ಕೆಟ್ಟದ್ದೋ? ವರದಿ ಏನು ಹೇಳುತ್ತದೆ
Thursday, March 13, 2025
ಪ್ರತಿನಿತ್ಯ ಮದ್ಯಸೇವನೆ ಮಾಡುವವರಲ್ಲದೆ, ಅಪರೂಪಕ್ಕೊಮ್ಮೆ ಮದ್ಯಸೇವನೆ ಮಾಡುವವರೂ ಇದ್ದಾರೆ. ಆದರೆ ಅವರು ಸ್ವಲ್ಪ ಮದ್ಯಪಾನ ಮಾಡುವುದರಿಂದ ಆರೋಗ್ಯಕ್ಕೇನು ಸಮಸ್ಯೆಯಿಲ್ಲ ಅಂದುಕೊಳ್ಳುತ್ತಾರೆ. ಇದು ತಪ್ಪು ಕಲ್ಪನೆ., ಕೆಲ ಹೊಸ ಅಧ್ಯಯನ ವರದಿಗಳ ಪ್ರಕಾರ ಆಗಾಗ ಮದ್ಯಸೇವನಿಗಳೂ ಕೂಡಾ ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ಅಸಾಧ್ಯ ಎನ್ನುತ್ತಿದೆ.
ಹೌದು, ಇತ್ತೀಚಿಗೆ ವೈರಲ್ ಆಗಿರುವ ವಿಡಿಯೋದಲ್ಲಿ ಅಮೆರಿಕ ಮೂಲದ ಗ್ಯಾಸ್ಟೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿಯವರು 'ಯಾವುದೇ ಪ್ರಮಾಣದ ಆಲೋಹಾಲ್ ನಿಜವಾಗಿಯೂ ಸುರಕ್ಷಿತವಲ್ಲ' ಎಂದು ಒತ್ತಿ ಹೇಳಿದ್ದಾರೆ.
ಮದ್ಯಪಾನ ಮಾಡುವುದರಿಂದ ಬಾಯಿ, ಗಂಟಲು, ಧ್ವನಿಪೆಟ್ಟಿಗೆ, ಅನ್ನನಾಳ, ಸ್ತನ, ಯಕೃತ್ತು ಸೇರಿದಂತೆ ಕನಿಷ್ಠ 7 ಬಗೆಯ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಹೆಚ್ಚು ಎಂದು ಅವರು ಹೊಸ ವರದಿಯನ್ನು ಉಲ್ಲೇಖಿಸಿದ್ದಾರೆ. ಧೂಮಪಾನ ಹಾಗೂ ಬೊಜ್ಜು ಬಳಿಕ ಅಮೆರಿಕದಲ್ಲಿ ಕ್ಯಾನ್ಸರ್‌ಗೆ ತಡೆಗಟ್ಟಬಹುದಾದ ಮೂರನೇ ಪ್ರಮುಖ ಕಾರಣವೆಂದರೆ ಮದ್ಯಪಾನ ಎಂದಿದ್ದಾರೆ.
ಆಗಾಗ ಮದ್ಯಸೇವನೆ ಒಳ್ಳೆಯದ್ದೋ, ಕೆಟ್ಟದ್ದೋ?
ಹಿಂದೆ ನಡೆದುರುವ ಅಧ್ಯಯನಗಳು ಲಘು ಮಧ್ಯಮ(ಆಗಾಗ) ಪ್ರಮಾಣದಲ್ಲಿ ಮದ್ಯ ಸೇವಿಸುವುದರಿಂದ ಕೆಲವು ರೋಗಗಳ ಅಪಾಯವನ್ನು ಸ್ವಲ್ಪ ಕಡಿಮೆ ಮಾಡಬಹುದು ಎಂದು ಸೂಚಿಸಿತ್ತು. ಆದರೆ ರಾಷ್ಟ್ರೀಯ ಆರೋಗ್ಯ ಸಂಸ್ಥೆ ನಡೆಸಿದ ಇತ್ತೀಚಿನ ಮೆಟಾ-ವಿಶ್ಲೇಷಣೆಯು ಈ ಹಳೆಯ ತೀರ್ಮಾನ ತಪ್ಪು ಎಂದು ಕಂಡುಕೊಂಡಿದೆ. ಮೇಯೊ ಕ್ಲಿನಿಕ್ ಪ್ರಕಾರ, ಯಾವುದೇ ಪ್ರಮಾಣದಲ್ಲಿ ಮದ್ಯ ಸೇವಿಸುವುದರಿಂದ ಆರೋಗ್ಯದ ಅಪಾಯವಿದೆ. ಮಧ್ಯಮ ಸೇವನೆಯಲ್ಲಿ ಅಪಾಯ ಕಡಿಮೆಯಿದ್ದರೂ, ಸೇವನೆಯೊಂದಿಗೆ ಅದು ಹೆಚ್ಚಾಗುತ್ತದೆ ಎಂದು ಹೇಳಿದೆ.