-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಈ ಬ್ಯಾಂಕ್‌ನಲ್ಲಿ ಖಾತೆ ಹೊಂದಿರದಿದ್ದರೂ ಎಫ್‌ಡಿ ಇಡಬಹುದು- ಏನಿದು ಹೊಸ ಯೋಜನೆ ಗೊತ್ತಾ? FD

ಈ ಬ್ಯಾಂಕ್‌ನಲ್ಲಿ ಖಾತೆ ಹೊಂದಿರದಿದ್ದರೂ ಎಫ್‌ಡಿ ಇಡಬಹುದು- ಏನಿದು ಹೊಸ ಯೋಜನೆ ಗೊತ್ತಾ? FD



ಆಧುನಿಕ ಯುಗದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಬಹಳಷ್ಟು ಸರಳವಾಗುತ್ತಿದೆ. ಗ್ರಾಹಕರ ಹಿತದೃಷ್ಟಿಯಿಂದ ಅವರಿಗೆ ಅನುಕೂಲವಾಗಲುವು ಕೆಲ ಬ್ಯಾಂಕ್‌ಗಳು ಹಣಕಾಸು ಸೇವೆ ಒದಗಿಸಲು ಹೊಸ ಮತ್ತು ಸರಳಿಕೃತ ವಿಧಾನವನ್ನು ಅನುಸರಿಸುತ್ತಿದೆ. ಇದೀಗ ಸೌತ್ ಇಂಡಿಯನ್ ಬ್ಯಾಂಕ್(ಎಸ್‌ಐಬಿ) SIB ಕ್ವಿಕ್ FD ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಇದರಲ್ಲಿ ಯಾರೂ ಬೇಕಾದರೂ ಸ್ಥಿರ(Fixed Deposit) ಠೇವಣಿ ಇಡಬಹುದು. ಈ ಪ್ರಕ್ರಿಯೆ ತುಂಬಾ ಸರಳವಾಗಿದ್ದು, ಹೇಗೆಂಬುದು ತಿಳಿಯೋಣ.

ಬ್ಯಾಂಕ್‌ ಖಾತೆ ಇಲ್ಲದಿದ್ದರೂ ಎಫ್‌ಡಿಗೆ ಅವಕಾಶ

ಎಸ್ಐಬಿ ಕ್ವಿಕ್ ಎಫ್‌ಡಿ ಹೊಸ ಯೋಜನೆಯಡಿಯಲ್ಲಿ ಠೇವಣಿ ಇಡಲು ಸೌತ್ ಇಂಡಿಯನ್ ಬ್ಯಾಂಕ್‌ನ ಖಾತೆ ಹೊಂದಿರುವವರು ಮಾತ್ರವಲ್ಲ, ಬೇರೆ ಯಾರೂ ಠೇವಣಿ ಇಡಬಹುದು. ಅಂದರೆ, ಬ್ಯಾಂಕ್ ಖಾತೆ ಹೊಂದಿಲ್ಲದವರಿಗೂ ಇದು ಎಫ್‌ಡಿ ಇಡಲು ಅನುಮತಿಸುತ್ತದೆ. ಈ ಪ್ರಕ್ರಿಯೆಯು ಬಹಳ ಸರಳವಾಗಿದೆ. ಇದರ ಎಲ್ಲಾ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡಬಹುದು. KYC ಸಲ್ಲಿಸುವುದು ಒಂದೇ ಪ್ರಮುಖ ಕೆಲಸ. ನಿಮ್ಮ ಪ್ಯಾನ್ ಮತ್ತು ಆಧಾ‌ರ್ ದಾಖಲೆಗಳ ಆನ್‌ಲೈನ್ ಪ್ರತಿ ಸಿದ್ಧವಾಗಿದ್ದರೆ, ನೀವು ಕೇವಲ ಐದು ನಿಮಿಷಗಳಲ್ಲಿ SIB ಯೊಂದಿಗೆ ಸ್ಥಿರ ಠೇವಣಿ ಯೋಜನೆಯನ್ನು ಪ್ರಾರಂಭಿಸಬಹುದು.

UPI ಮೂಲಕ ಹಣ ಸಂದಾಯ

ನೀವು ಯಾವುದೇ ಸಮಯದಲ್ಲೂ ಆನ್‌ಲೈನ್‌ನಲ್ಲಿ ಎಸ್ಐಬಿ ಕ್ವಿಕ್ ಎಫ್‌ಡಿ ತೆರೆಯಬಹುದು. ಅಲ್ಲದೆ, ಆನ್‌ಲೈನ್ ಮೂಲಕ ಯಾವುದೇ ಯುಪಿಐ ಮತ್ತು ಬ್ಯಾಂಕ್ ಮೂಲಕ ನೇರವಾಗಿ ಹಣ ಸಂದಾಯ ಮಾಡಬಹುದು. FDಗೆ ಕನಿಷ್ಠ ಮೊತ್ತ 1,000 ರೂ. ಠೇವಣಿ ಇಡಬಹುದು. ನಿಮ್ಮ ವಿವಿಧ ಅಗತ್ಯಗಳಿಗೆ ಇದು ಅನುಕೂಲಕರವಾಗಿದೆ. ಠೇವಣಿಯ ಮೇಲಿನ ಬಡ್ಡಿಯೂ ಆಕರ್ಷಕವಾಗಿದೆ. ಗಡುವಿನ ಮೊದಲು ಠೇವಣಿಗಳನ್ನು ಹಿಂಪಡೆಯಲು ಅವಕಾಶಗಳಿವೆ. ಐದು ಲಕ್ಷ ರೂಪಾಯಿಗಳವರೆಗಿನ ಮೊತ್ತಕ್ಕೆ ವಿಮಾ ರಕ್ಷಣೆಯೂ ಇದೆ. 

Ads on article

Advertise in articles 1

advertising articles 2

Advertise under the article

ಸುರ