ತಿನ್ನಲು ಇಲ್ಲದೆ ಖಾಲಿ ಹೊಟ್ಟೆಯಲ್ಲಿ ಮಲಗಿದ್ದಾತ ಇಂದು ಬಹುಕೋಟಿ ಉದ್ಯಮದ ಒಡೆಯ
ಬಡವನಾಗಿ ಹುಟ್ಟಿದ್ದರೂ ಬಡವನಾಗಿ ಸಾಯಬಾರದು ಎಂಬೊಂದು ಮಾತಿದೆ. ಅದರಂತೆ ಕೆಲವರದ್ದು, ಹುಟ್ಟು ಬಡತನದಿಂದ ಕೂಡಿದ್ದರೂ ಕಠಿಣ ಪರಿಶ್ರಮದೊಂದಿಗೆ ಬುದ್ಧಿವಂತಿಕೆ ಬಳಸಿದರೆ ಬದುಕು ಅಮೋಘವಾಗಿರುತ್ತದೆ ಎಂಬುದಕ್ಕೆ ನಮ್ಮ ನಡುವೆ ಬದುಕುತ್ತಿರುವ ಅನೇಕ ಮಿಲಿಯನೇರ್‌ಗಳೇ ಸಾಕ್ಷಿ. ಇಂದು ಅವರು ಕೋಟ್ಯಾಧಿಪತಿಗಳು ಆಗಿದ್ದರೂ ಅವರ ಹಿನ್ನೆಲೆ ಬಹಳ ತಳಮಟ್ಟದಿಂದ ಆರಂಭವಾಗಿತ್ತು ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ. ಇದು ಬಡತನದಿಂದ ಮೇಲೆ ಬರಲು ಕನಸು ಕಾಣುವ ಹಲವು ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದ್ದಾರೆ. ಅಂತವರಲ್ಲಿ ಒಬ್ಬರು ಅನುಪಮ್ ಮಿತ್ತಲ್ ಅವರ ಸ್ಪೂರ್ತಿದಾಯಕ ಕತೆ ಇಲ್ಲಿದೆ.
ಶಾದಿ.ಕಾಮ್ ಸ್ಥಾಪಕರಾಗಿ, 'ಶಾರ್ಕ್ ಟ್ಯಾಂಕ್ ಇಂಡಿಯಾ'ದಲ್ಲಿ ಜಡ್ಜ್ ಆಗಿರುವ ಅನುಪಮ್ ಮಿತ್ತಲ್ ಉದ್ಯಮ ಲೋಕದಲ್ಲಿ ಗಮನ ಸೆಳೆಯುವ ಹೆಸರು. ಆದರೆ ಅವರ ಆರಂಭ ಹೇಗಿತ್ತು ಎಂಬುದನ್ನು ಅವರೇ ಈಗ ಹೇಳಿಕೊಂಡಿದ್ದಾರೆ. ಬಾಂಬೆ ಶೇವಿಂಗ್ ಕಂಪೆನಿಯ ಸಂಸ್ಥಾಪಕ ಶಾಂತನು ದೇಶಪಾಂಡೆ ಅವರೊಂದಿಗೆ 'ಬಾರ್ಬರ್‌ಶಾಪ್ ಪಾಡ್‌ಕ್ಯಾಸ್ಟ್'ನಲ್ಲಿ, ತಮ್ಮ ಬಾಲ್ಯ ಹೇಗಿತ್ತು ಹೇಗೆ ಮೇಲೆ ಬಂದೆವು ಎಂಬುದನ್ನು ಅವರು ಹೇಳಿಕೊಂಡಿದ್ದಾರೆ.
ಮುಂಬೈನ ಸಣ್ಣ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸಾವಿರ ಚದರಡಿಯ ಮನೆಯಲ್ಲಿ 20ಮಂದಿ ವಾಸಿಸುವ ಕುಟುಂಬದಲ್ಲಿ ತನ್ನ ಬಾಲ್ಯ ಕಳೆದಿತ್ತು. ಮನೆಯಲ್ಲಿ ಬಹಳ ಜನರಿದ್ದ ಕಾರಣಕ್ಕೆ ಮಗುವಾಗಿ ನನಗೆ ಬಹಳ ಖುಷಿ ಇತ್ತು. ಆದರೆ ಕುಟುಂಬ ಆಗ ಎದುರಿಸುತ್ತಿದ್ದ ಹಣಕಾಸಿನ ಸಮಸ್ಯೆಯ ಬಗ್ಗೆ ನನಗೆ ಅರಿವಿರಲಿಲ್ಲ. ನಾವು ಡೈನಿಂಗ್ ಟೇಬಲ್‌ನ ಕೆಳಗೆ ಮಲಗುತ್ತಿದ್ದೆವು. ಮಕ್ಕಳಾಗಿ ನಾವು ಮನೆಯಲ್ಲಿ ತುಂಬಿರುವ ಜನರನ್ನು ನೋಡಿ ಖುಷಿ ಪಡುತ್ತಿದ್ದೆವು. ತಂದೆ ವಸ್ತ್ರೋದ್ಯಮದಲ್ಲಿ ಆರಂಭಿಕ ಯಶಸ್ಸು ಕಂಡರೂ ಕುಟುಂಬವೂ ಆರ್ಥಿಕವಾಗಿ ಬಹಳ ಸಂಕಷ್ಟದ ಸಮಯವನ್ನು ಎದುರಿಸುತ್ತಿತ್ತು.
ಈ ಕಷ್ಟದ ನಡುವೆ ಮಕ್ಕಳು ಬೆಳೆದು ದೊಡ್ಡವರಾದರು, ಅಧ್ಯಯನಕ್ಕಾಗಿ ಅನುಪಮ್ ಮಿತ್ತಲ್ ಅಮೆರಿಕಾಗೆ ಹೊರಟರು. ಆದರೆ ಕೆಲಸ ಹುಡುಕಲು ಅವರು ಬಹಳ ಕಷ್ಟಪಟ್ಟರು. ಆದರೆ ಕುಟುಂಬಕ್ಕೆ ಈ ವಿಚಾರ ತಿಳಿಸಿದರೆ ಅವರು ಮರುಗುತ್ತಾರೆ. ಹೀಗಾಗಿ ತಮ್ಮ ಕಷ್ಟವನ್ನು ಹೇಳಿ ಅವರಿಗೆ ಮತ್ತಷ್ಟು ಕಷ್ಟ ನೀಡಲು ಇಷ್ಟಪಡದ ಅನುಪಮ್ ಕೆಲಸ ಇಲ್ಲದ ಬಗ್ಗೆ ಪೋಷಕರಿಗೆ ಹೇಳಿಯೇ ಇರಲಿಲ್ಲ,
ತನ್ನ ಬಳಿ ಹಣ ಇರಲಿಲ್ಲ. ಒಂದು ವೇಳೆ ಕುಟುಂಬದ ಬಳಿ ಕೇಳಿದರೆ ಅವರು ನನ್ನ ಸಂಬಳ ಏನು ಮಾಡುತ್ತೇನೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಿದ್ದರು. ಹೀಗಾಗಿ ನಾನು ನನ್ನ ಜೀವನದಲ್ಲಿ ಮೊದಲ ಬಾರಿಗೆ ಖಾಲಿ ಹೊಟ್ಟೆಯಲ್ಲಿ ಕಳೆದೆ. ನಾನು ದಿನಕ್ಕೆ ಒಮ್ಮೆಯೂ ಊಟ ಮಾಡದ ದಿನವೂ ಇತ್ತು. ಏಕೆಂದರೆ ಅಲ್ಲಿ ಖರೀದಿ ಮಾಡುವಷ್ಟು ಹಣ ನನ್ನ ಬಳಿ ಇರುತ್ತಿರಲಿಲ್ಲ. ಇದು ನಿಮಗೆ ಬಹಳಷ್ಟು ಜೀವನ ಪಾಠ ಕಲಿಸುವ ವಿನಮ್ರ ಅನುಭವವಾಗಿದೆ ಎಂದು ಅನುಪಮ್ ಮಿತ್ತಲ್ ಹೇಳಿಕೊಂಡಿದ್ದಾರೆ.
ಆದರೆ ಶ್ರಮಕ್ಕೆ ತಕ್ಕ ಫಲ ಎಂಬಂತೆ ಅದೃಷ್ಟವೂ ಅನುಪಮ್ ಮಿತ್ತಲ್ ಜೊತೆಯಾಯ್ತು, 20ವರ್ಷಕ್ಕಾಗಲೇ ಅನುಪಮ್ ಹಲವು ಲಕ್ಷಗಳಿಗೆ ಅಧಿಪತಿಯಾದರು. ಇದೊಂತರ ನಾನು ಕಲ್ಪನೆಯೂ ಮಾಡಿರದ ಹುಚ್ಚುತನ, ನಾನು ಸ್ಪೋರ್ಟ್ಸ್ ಕಾರನ್ನು ಆರ್ಡರ್ ಮಾಡಿದೆ. ಸ್ಟೇಡಿಯಂನಲ್ಲಿ ಪಾರ್ಟಿ ಮಾಡಿದೆ. ಅಲ್ಲದೇ ಕ್ರೂಸಿ ಶಿಪ್‌ನ ಕಾರ್ಪೋರೇಟ್ ಇವೆಂಟ್‌ಗಳಲ್ಲಿ ಭಾಗವಹಿಸಿದೆ. ಇದೊಂತರ ಹೊಸದಾದ ದೊಡ್ಡ ಜಗತ್ತು ಎಂದು ಅವರು ಪಾಡ್‌ಕಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.