-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪೆನ್‌ಡ್ರೈವ್‌ನಲ್ಲಿ ನೀಟ್ ಶಿಕ್ಷಕನ ಕಾಮಲೀಲೆ- ವಿದ್ಯಾರ್ಥಿನಿಯೊಂದಿಗಿದ್ದ 10ನಿಮಿಷದ ವೀಡಿಯೋ ಲೀಕ್

ಪೆನ್‌ಡ್ರೈವ್‌ನಲ್ಲಿ ನೀಟ್ ಶಿಕ್ಷಕನ ಕಾಮಲೀಲೆ- ವಿದ್ಯಾರ್ಥಿನಿಯೊಂದಿಗಿದ್ದ 10ನಿಮಿಷದ ವೀಡಿಯೋ ಲೀಕ್


ಮಾಜಿ ಸಂಸದ ಪ್ರಜ್ವಲ್ ಪೆನ್​ಡ್ರೈವ್​ ಹಗರಣ ಕೆಲ ತಿಂಗಳ ಹಿಂದೆ ದೇಶದಕ್ಕಿಯೇ ಭಾರಿ ಸದ್ದು ಮಾಡಿತ್ತು. ಇದೀಗ ಅಂಥಹದ್ದೇ ಪೆನ್‌ಡ್ರೈವ್ ವಿಡಿಯೋ ವೈರಲ್​ ಆಗಿದೆ. ನೀಟ್​ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿನಿಯೊಂದಿಗೆ ಜೀವಶಾಸ್ತ್ರ ಬೋಧಿಸುತ್ತಿದ್ದ ಸಾಹಿಲ್ ಸಿದ್ದಿಕಿ ಎಂಬ ಶಿಕ್ಷಕನ ಕರಾಮತ್ತು ಇದಾಗಿದೆ. ಅಲ್ಲಿರುವ ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯಾವಳಿ ಸೆರೆಯಾಗಿದೆ. ಬಾತ್​ರೂಮ್​ನಲ್ಲಿ ವಿದ್ಯಾರ್ಥಿನಿಯೊಂದಿಗೆ ಮಾಡಬಾರದ್ದು ಮಾಡುತ್ತಾ ಸಿಕ್ಕಿಬಿದ್ದಿರುವ ದೃಶ್ಯ ಇದರಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳನ್ನು ಪೆನ್​ಡ್ರೈವ್​ನಲ್ಲಿ ಪೊಲೀಸರಿಗೆ ಯಾರೋ ಕಳಿಸಿರುವ ಹಿನ್ನೆಲೆಯಲ್ಲಿ ಶಿಕ್ಷಕ ಸದ್ಯ ಅರೆಸ್ಟ್​ ಆಗಿದ್ದಾನೆ.

ಉತ್ತರ ಪ್ರದೇಶದ ಕಾನ್ಪುರದ ಕಾಕಡಿಯೊದಲ್ಲಿ ಐ ಆ್ಯಂಡ್​ ಐ ಕೋಚಿಂಗ್‌ನಲ್ಲಿ ಜೀವಶಾಸ್ತ್ರವನ್ನು ಬೋಧಿಸುತ್ತಿರುವ ಸಾಹಿಲ್ ಸಿದ್ದಿಕಿ ಎಂಬ ಶಿಕ್ಷಕನನ್ನು ರವಿವಾರ ಪೊಲೀಸರು ಬಂಧಿಸಿದ್ದಾರೆ. ನೀಟ್​ ಪರೀಕ್ಷೆಗೆ ತಯಾರುಗುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.  ಕೋಚಿಂಗ್ ಸೆಂಟರ್‌ನ ನಿರ್ದೇಶಕ ಆಶಿಶ್ ಶ್ರೀವಾಸ್ತವ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಎರಡು ದಿನಗಳ ಹಿಂದೆ, ಕೋಚಿಂಗ್ ಸೆಂಟರ್‌ಗೆ ಸಾಹಿಲ್ ಅವರ ಹೆಸರಿದ್ದ ಒಂದು ಲಕೋಟೆ ಬಂದಿತ್ತು. ಆ ಮುಚ್ಚಿದ ಲಕೋಟೆ ಆಶಿಶ್​ ಶ್ರೀವಾಸ್ತವ ಕೈಸೇರಿತು. ಒಳಗೆ ಪೆನ್ ಡ್ರೈವ್ ಇದ್ದು, ಲ್ಯಾಪ್‌ಟಾಪ್‌ಗೆ ಕನೆಕ್ಟ್​ ಮಾಡಿದಾಗ , ಕೋಚಿಂಗ್ ಸೆಂಟರ್‌ನಲ್ಲಿ ಸಾಹಿಲ್ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆಯಲ್ಲಿ ತೊಡಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಬಹಿರಂಗಪಡಿಸಿತು. ಸುಮಾರು 10 ನಿಮಿಷಗಳ ಕಾಲ ಬಾತ್​ರೂಮ್​ನಲ್ಲಿ ವಿದ್ಯಾರ್ಥಿನಿಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವುದು ಅದರಲ್ಲಿ ದಾಖಲಾಗಿದೆ. ಇದರ ವಿಡಿಯೋ ಈಗ ವೈರಲ್​ ಆಗಿದೆ. 


ಈ ವಿಡಿಯೋದ ಬಗ್ಗೆ ವಿಭಿನ್ನ ರೀತಿಯ ಚರ್ಚೆಗಳು ಶುರುವಾಗಿದೆ. ಇದರಲ್ಲಿ ವಿದ್ಯಾರ್ಥಿನಿ ಶಿಕ್ಷಕನೊಂದಿಗೆ ಸಲೀಸಾಗಿ ಇರುವುದನ್ನು ನೋಡಿರುವ ಹಲವರು, ಇದರಲ್ಲಿ ವಿದ್ಯಾರ್ಥಿನಿಯ ತಪ್ಪು ಕೂಡ ಇದೆ ಎಂದಿದ್ದಾರೆ. ವಿದ್ಯಾರ್ಥಿನಿ ಆರಾಮವಾಗಿ ಶಿಕ್ಷಕನಿಗೆ ಸಪೋರ್ಟ್​ ಮಾಡುವುದನ್ನು ನೋಡಬಹುದು ಎನ್ನುವುದು ಬಹುತೇಕರ ಅಭಿಮತ. ಆದರೆ ಇಂಥ ಪ್ರಕರಣಗಳಲ್ಲಿ ಶಿಕ್ಷಕರಿಗಷ್ಟೇ ಶಿಕ್ಷೆಯಾಗುವುದು ತಪ್ಪು ಎಂದು ಹಲವರು ಹೇಳುತ್ತಿದ್ದಾರೆ.  


Ads on article

Advertise in articles 1

advertising articles 2

Advertise under the article

ಸುರ