ಪುತ್ತೂರು: ಆತ್ಮಹತ್ಯೆಗೈದ ರೀತಿಯಲ್ಲಿ ಮಹಿಳೆಯ ತಲೆಬುರುಡೆ, ಕೂದಲು, ಕೊಳೆತ ದೇಹದ ಅವಶೇಷ ಪತ್ತೆ- ಆತ್ಮಹತ್ಯೆಯೋ, ಕೊಲೆಯೋ ಶಂಕೆ?


ಪುತ್ತೂರು: ತಿಂಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಕೂದಲು ಹಾಗೂ ಕೊಳೆತ ಮೃತದೇಹದ ಅವಶೇಷ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕುಂಬ್ರದ ಒಳಮೊಗ್ರು ಗ್ರಾಮದ ಕಾಡಿನಲ್ಲಿ ಪತ್ತೆಯಾಗಿದೆ. ಇವರ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ಶಂಕೆ ವ್ಯಕ್ತವಾಗಿದೆ.

ಪುತ್ತೂರಿನ ಉರ್ವ ನಿವಾಸಿ ಸಂಜೀವ ಎಂಬವರ ಪತ್ನಿ ನಳಿನಿ ಎಂಬವರ ಕೊಳೆತ  ತಲೆಬುರುಡೆ ಮತ್ತು ಎಲುಬುಗಳು ಪತ್ತೆಯಾಗಿದೆ.

ನಳಿನಿಯವರು ಒಂದೂವರೆ ವರ್ಷಗಳ ಹಿಂದೆ ಸಂಜೀವರನ್ನು ಮದುವೆಯಾಗಿದ್ದರು. ಆಗಾಗ ತಮ್ಮ ತಾಯಿ ಮನೆಗೆ ಹೋಗುತ್ತಿದ್ದ ನಳಿನಿ ಏಕಾಏಕಿ ನಾಪತ್ತೆಯಾಗಿದ್ದರು‌. ಪತ್ನಿ ನಾಪತ್ತೆಯಾದ ಬಗ್ಗೆ ಅಕ್ಟೋಬರ್ 8ರಂದು ಸಂಪ್ಯ ಪೊಲೀಸ್‌ ಠಾಣೆಯಲ್ಲಿ ಪತಿ ಸಂಜೀವ ದೂರು ಕೊಡಲು ಬಂದಿದ್ದರು. ಈ ವೇಳೆ ಪೊಲೀಸರು ಪತ್ನಿಯ ಫೋಟೋ ತರುವಂತೆ ತಿಳಿಸಿದ್ದರು‌. ಆ ಬಳಿಕ ಪತಿ ಸಂಜೀವ ಠಾಣೆಗೆ ತೆರಳಿ ದೂರು ನೀಡಿರಲಿಲ್ಲ. ನಳಿನಿಯವರು ನಾಪತ್ತೆಯಾಗಿರುವ ವಿಚಾರ ತಿಳಿದು ತವರು ಮನೆಯವರೇ ಸಂಜೀವರವರ ಉರ್ವದ ಮನೆಯ ಸುತ್ತಮುತ್ತ ಹುಡುಕಾಟ ನಡೆಸುತ್ತಿದ್ದರು.


ಹುಡುಕಾಟದ ವೇಳೆ ಮನೆಯ ಮುಂಭಾಗದ ಕಾಡೊಂದರಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಕೊಳೆತ ಮೃತದೇಹದ ಅವಶೇಷ ಪತ್ತೆಯಾಗಿದೆ. ಮರವೊಂದಕ್ಕೆ ಸೀರೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕೂದಲು ಮಾತ್ರ ಪತ್ತೆಯಾಗಿದ್ದು,  ಕೊಳೆತ ದೇಹದ ಅವಶೇಷ ಪತ್ತೆಯಾಗಿದೆ. ಮರದ ಕೆಳಗಡೆ ತಲೆ ಬುರುಡೆ ಹಾಗೂ ಕೈಕಾಲಿನ ಎಲುಬುಗಳು ದೊರಕಿದೆ. ಆತ್ಮಹತ್ಯೆಯೋ, ಕೊಲೆಯೋ ಶಂಕೆ ಮೂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu