ಲೋಕಾಯುಕ್ತದಲ್ಲಿ ಹಲವು ಹುದ್ದೆಗಳು: ಪಿಯುಸಿ ಪಾಸ್ ಆದವರಿಗೂ ಅವಕಾಶ

ಲೋಕಾಯುಕ್ತದಲ್ಲಿ ಹಲವು ಹುದ್ದೆಗಳು: ಪಿಯುಸಿ ಪಾಸ್ ಆದವರಿಗೂ ಅವಕಾಶ





ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಗ್ರೂಪ್ ಸಿ ಹುದ್ದೆ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇದ್ದು, ಅದರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.

ಪಿಯುಸಿ ಪಾಸ್ ಆದವರಿಗೂ ಅವಕಾಶ ಇದ್ದು, ಕ್ಲರ್ಕ್‌ ಕಂ ಟೈಪಿಸ್ಟ್ ಹುದ್ದೆಗಳು ಖಾಲಿ ಇದೆ. ಉಳಿಕೆ ಮೂಲ ವೃಂದದಲ್ಲಿ 16 ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕದ ಸ್ಥಳೀಯ ವೃಂದದಲ್ಲಿ 14 ಹುದ್ದೆಗಳು ಖಾಲಿ ಇದೆ.


ದ್ವಿತೀಯ ಪಿಯುಸಿ ಪಾಸ್ ಆಗಿದ್ದು, ಅದರ ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಪಾಸ್ ಆಗಿರಬೇಕು.


ಕನಿಷ್ಟ 18ರಿಂದ ಗರಿಷ್ಟ 38 ವರ್ಷದ ಒಳಗಿನ ವಯೋಮಾನದವರಿಗೆ ಅವಕಾಶ ಕಲ್ಪಿಸಲಾಗಿದೆ. ವಯೋಮಾನದಲ್ಲಿ ನಿಯಮಾನುಸಾರ ಸಡಿಲಿಕೆ ಇದೆ.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-11-2024


ವೇತನ ಶ್ರೇಣಿ- ಮಾಸಿಕ ರೂ. 31,100/- ರಿಂದ 67,600/- ರೂ. ವರೆಗೆ


ಅರ್ಹತೆ ಇರುವ ಆಕಾಂಕ್ಷಿ ಅಭ್ಯರ್ಥಿಗಳು ಲೋಕಾಯುಕ್ತ ಸಂಸ್ಥೆಯ ಅಂತರ್ಜಾಲಕ್ಕೆ ನೇರವಾಗಿ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


BREAKING NEWS
Loading latest news...
Join our WhatsApp Channel Powered By : Online Pudu