ಮಂಗಳೂರಿನಲ್ಲಿ ಅಲ್ಟ್ರಾವಯಲೆಟ್‌ನ ಹೊಸ ಅನುಭವ ಕೇಂದ್ರ ಸ್ಪೇಸ್‌ ಸ್ಟೇಷನ್‌ ಆರಂಭ- ಬಂದಿದೆ EV ಸುಪರ್ ಬೈಕ್!

●       50 ಸ್ಪೇಸ್‌ ಸ್ಟೇಷನ್‌ ಆರಂಭಿಸುವ ಅಲ್ಟ್ರಾವಯಲೆಟ್‌ನ ವಿಸ್ತರಣೆ ಕಾರ್ಯತಂತ್ರಕ್ಕೆ ಪೂರಕವಾಗಿ ಮಂಗಳೂರಿನಲ್ಲಿ ಕೇಂದ್ರ ಆರಂಭ

●       ಮಂಗಳೂರಿನ ಸ್ಪೇಸ್‌ ಸ್ಟೇಷನ್‌ ಭಾರತದಲ್ಲಿ ಅಲ್ಟ್ರಾವಯಲೆಟ್‌ನ 7ನೇ ಕೇಂದ್ರ.

●       ಮಂಗಳೂರಿನ ಸ್ಪೇಸ್‌ ಸ್ಟೇಷನ್‌ನಲ್ಲಿ ಗ್ರಾಹಕರ ಎಲ್ಲ ಅಗತ್ಯತೆಗಳನ್ನು (3ಎಸ್‌) ಪೂರೈಸುವ ಸೌಕರ್ಯ

●       ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಹೊಂದಿರುವ ಸ್ಪೇಸ್‌ ಸ್ಟೇಷನ್‌ ಕಂಪೆನಿಯ ಬೆಂಗಳೂರು ಕೇಂದ್ರ ಕಚೇರಿಯಿಂದ ಗ್ರಾಹಕ ಸೇವೆಗಳು ವರ್ಧನೆಗೊಂಡಿದೆ.

 

ಮಂಗಳೂರು, ನವೆಂಬರ್‌ 18- ಮುಂಚೂಣಿಯ ಇವಿ ಸೂಪರ್‌ಬೈಕ್‌ ಉತ್ಪಾದಕ ಕಂಪೆನಿ ಅಲ್ಟ್ರಾವಯಲೆಟ್‌ ಮಂಗಳೂರಿನಲ್ಲಿ ಹೊಸ ಯುವಿ ಸ್ಪೇಸ್‌ ಸ್ಟೇಷನ್‌ ಆರಂಭಿಸಿದೆ. ಕಂಪೆನಿಯ ವಿಸ್ತರಣೆಯ ಹಾದಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಯುವಿ ಸ್ಪೇಸ್‌ ಸ್ಟೇಷನ್‌, ಅಲ್ಟ್ರಾವಯಲೆಟ್‌ನ ನೂತನ ತಂತ್ರಜ್ಞಾನಗಳ ಎಲೆಕ್ಟ್ರಿಕ್‌ ವಾಹನಗಳನ್ನು ಗ್ರಾಹಕರಿಗೆ ತಲುಪಿಸಲಿದೆ. ಮಂಗಳೂರಿನ ಗ್ರಾಹಕರು ಸುಲಭವಾಗಿ ಇವಿ ಸೂಪರ್‌ಬೈಕ್‌ಗಳ ಸಾಮರ್ಥ್ಯವನ್ನು ಪರೀಕ್ಷಿಸಿ ಖರೀದಿಸಲು ಸಾಧ್ಯವಾಗಲಿದೆ.

ಹೊಸ ಕೇಂದ್ರ ಕರ್ನಾಟಕದಲ್ಲಿ ಕಂಪೆನಿಯ ಎರಡನೇ ಸ್ಪೇಸ್‌ ಸ್ಟೇಷನ್‌ ಆಗಿದೆ. ಈ ಕ್ಯಾಲೆಂಡರ್‌ ವರ್ಷದಲ್ಲಿ ಒಟ್ಟು ಹನ್ನೆರಡು ಸ್ಪೇಸ್‌ ಸ್ಟೇಷನ್‌ ಆರಂಭಿಸುವ ಗುರಿಯನ್ನು ಕಂಪೆನಿ ಹೊಂದಿದೆ.

ಬೆಂದೂರ್‌ವೆಲ್‌ನಲ್ಲಿರುವ ಸ್ಪೇಸ್‌ ಸ್ಪೇಷನ್‌ ಇವಿ ಅನುಭವ ಕೇಂದ್ರ ಗ್ರಾಹಕರಿಗೆ ವಿನೂತನ ಅನುಭವ ನೀಡಲಿದೆ. ಇವಿ ದ್ವಿಚಕ್ರವಾಹನ ಕ್ಷೇತ್ರದಲ್ಲಿ ಹೆಸರಾಗಿರುವ ಅಲ್ಟ್ರಾವಯಲೆಟ್‌ನ F77 ಮಾಕ್‌2 ಬೈಕ್‌ಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಉತ್ತಮ ಮೈಲೇಜ್‌, ಅಧಿಕ ಸಾಮರ್ಥ್ಯ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿರುವ F77 ಮಾಕ್‌2 ಇವಿ ಉದ್ಯಮದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸಿದೆ.
ಹೊಸ ಸ್ಪೇಸ್‌ ಸ್ಪೇಷನ್‌ಗೆ ಚಾಲನೆ ನೀಡಿ ಮಾತನಾಡಿದ ಅಲ್ಟ್ರಾವಯಲೆಟ್‌ನ ಸಿಇಒ ಮತ್ತು ಸಹಸ್ಥಾಪಕರಾದ ನಾರಾಯಣ್‌ ಸುಬ್ರಮಣಿಯಮ್‌ ಅವರು “ಇವಿ ಬಳಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಮ್ಮ ಮೊದಲ ಕೇಂದ್ರವನ್ನು ಆರಂಭಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಈ ನೂತನ ಡೀಲರ್‌ಷಿಪ್‌ ಮೂಲಕ ನಮ್ಮ ಆಧುನಿಕ ತಂತ್ರಜ್ಞಾನದ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲು ಸಾಧ್ಯವಾಗಲಿದೆ. ನಗರದ ಸಂಚಾರ ಮಾದರಿಯಲ್ಲಿ ಹೊಸತನವನ್ನು ತರಲು ಕಂಪೆನಿ ಉತ್ಸುಕವಾಗಿದ್ದು ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ನಮ್ಮ ಕೇಂದ್ರದ ಆರಂಭ ಸಹಕಾರಿಯಾಗಲಿದೆ” ಎಂದು ತಿಳಿಸಿದರು.

ಮಂಗಳೂರಿನ ಯುವಿ ಸ್ಪೇಸ್‌ ಸ್ಟೇಷನ್‌ ಮಾರಾಟ, ಸೇವೆ ಮತ್ತು ಬಿಡಿಭಾಗಗಳ ಮಾರಾಟ ಮೂರೂ (3S) ವಿಭಾಗಗಳನ್ನು ಹೊಂದಿದೆ. ವಾಹನಗಳನ್ನು ಕಾಲಕಾಲಕ್ಕೆ ಪರೀಕ್ಷಿಸುವ, ಕ್ಲಪ್ತಸಮಯಕ್ಕೆ ತಾಂತ್ರಿಕ ನೆರವು ನೀಡುವ ಸೌಲಭ್ಯ ಇರಲಿದೆ. ಅಲ್ಟ್ರಾವಯಲೆಟ್‌ನ ಬೆಂಗಳೂರು ಕೇಂದ್ರ ಈಗಾಗಲೇ ಗ್ರಾಹಕ ಸೇವೆಗೆ ಹೆಸರಾಗಿದೆ. ಹೊಸ ಖರೀದಿಯಾಗಲೀ ಅಥವಾ ಹಾಲಿ ವಾಹನದ ನಿರ್ವಹಣೆಯಾಗಲೀ ಈ ಕೇಂದ್ರ ಗ್ರಾಹಕರ ಪ್ರಯಾಣದ ಪ್ರತೀ ಹಂತದಲ್ಲಿಯೂ ನೆರವಾಗಲಿದೆ.

ಅಲ್ಟ್ರಾವಯಲೆಟ್‌ನ ಸಿಟಿಒ ಮತ್ತು ಸಹ ಸ್ಥಾಪಕ ನೀರಜ್‌ ರಾಜಮೋಹನ್‌ ಮಾತನಾಡಿ “ಮಂಗಳೂರಿನಲ್ಲಿ ಡೀಲರ್‌ಷಿಪ್‌ ಆರಂಭಿಸುವ ಮೂಲಕ ನಾವು ಎಲೆಕ್ಟ್ರಿಕ್‌ ಮೊಬಿಲಿಟಿಯನ್ನು ದೇಶಾದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಇಟ್ಟಿದ್ದೇವೆ. ನಾವು F77 ಮಾಕ್‌2 ಬೈಕನ್ನು ಸರಿಸಾಟಿಯಿಲ್ಲದ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯನ್ನು ಹುಟ್ಟಿಸುವ ರೀತಿಯಲ್ಲಿ ರೂಪಿಸಿದ್ದೇವೆ. ಮಂಗಳೂರಿನ ಗ್ರಾಹಕರೂ ನಮ್ಮ ತಂತ್ರಜ್ಞಾನವನ್ನು ಪರೀಕ್ಷಿಸಿ ನೋಡಬೇಕೆನ್ನುವುದು ನಮ್ಮ ಉದ್ದೇಶ” ಎಂದರು.
ಅಲ್ಟ್ರಾವಯಲೆಟ್‌ ಈಗಾಗಲೇ ಬೆಂಗಳೂರು, ಪುಣೆ, ಅಹ್ಮದಾಬಾದ್‌, ಕೊಚ್ಚಿ, ಹೈದರಾಬಾದ್‌ ಮತ್ತು ನೇಪಾಳದಲ್ಲಿ ಸ್ಪೇಸ್‌ ಸ್ಟೇಷನ್‌ ಆರಂಭಿಸಿದ್ದು, ಮಂಗಳೂರು ಹೊಸ ಕೇಂದ್ರವಾಗಿದೆ. ಹೊಸ ಅನುಭವ ಕೇಂದ್ರದಲ್ಲಿ ಗ್ರಾಹಕರು ಬೈಕ್‌ ಪರೀಕ್ಷಿಸಬಹುದು, ಟೆಸ್ಟ್‌ ರೈಡ್‌ ಮಾಡಿ ಖರೀದಿಸಬಹುದು.

ಹೊಸ ಕೇಂದ್ರದ ವಿಳಾಸ ಹೀಗಿದೆ; ಜಿ -01, ಗ್ರೌಂಡ್‌ ಫ್ಲೋರ್‌, ಲೋಟಸ್‌ ಪ್ಯಾರಡೈಸ್‌ ಪ್ಲಾಜಾ, ಬೆಂದೂರ್‌ವೆಲ್‌, ಮಂಗಳೂರು- 575002