ವಿಶ್ವದ ಅತೀ ದುಬಾರಿ ಬೆಲೆಯ ಕಾಂಡಮ್ ಎಲ್ಲಿದೆ ಗೊತ್ತೇ? ಇದರ ಬೆಲೆಗೆ ಐಫೋನ್‌ ಬರುತ್ತದೆ...!


ನವದೆಹಲಿ: ಗರ್ಭನಿರೋಧಕ ಹಾಗೂ ಆರೋಗ್ಯದ ದೃಷ್ಟಿಯಿಂದ ಲೈಂಗಿಕ ಸಂಪರ್ಕದ ವೇಳೆ ಕಾಂಡೋಮ್ ಬಳಕೆ ಮಾಡಲಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ಕಂಪೆನಿಗಳ ಕಾಂಡೋಮ್‌ಗಳು ಸಿಗುತ್ತದೆ. ವಿಶ್ವದಾದ್ಯಂತ ಜನನ ನಿಯಂತ್ರಣಕ್ಕೆ ಜನತೆ ಆಯ್ದುಕೊಳ್ಳುವ ಸುಲಭ ಮಾರ್ಗ ಕಾಂಡೋಮ್ ಬಳಕೆ.  ಕಾಂಡೋಮ್ ಬೇಡಿಕೆ ಯಾವ ಸಮಯದಲ್ಲಿಯೂ ಕುಸಿತ ಕಂಡಿಲ್ಲ. ಪ್ರತಿವರ್ಷ ಕಾಂಡೋಮ್ ಮಾರಾಟದ ಪ್ರಮಾಣ ಏರಿಕೆಯಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಕೋವಿಡ್-19 ಕಾಲಘಟ್ಟದಲ್ಲಿ ಕಾಂಡೋಮ್ ಬೇಡಿಕೆ ದೊಡ್ಡಪ್ರಮಾಣದಲ್ಲಿ ಏರಿಕೆಯಾಗಿತ್ತು. ಈ ಸಂದರ್ಭ ಮಾರುಕಟ್ಟೆಯಲ್ಲಿ ಸುಮಾರು 10 ಕೋಟಿ ಕಾಂಡೋಮ್‌ಗಳ ಕೊರತೆ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ವಿಶ್ವದ ಅತಿದೊಡ್ಡ ಕಾಂಡೋಮ್ ತಯಾರಿಕೆ ಕಂಪನಿ Karex Bhd ಸಹ ಬಂದ್ ಆಗಿತ್ತು.


ಇದೀಗ ನಾವು ಅತಿ ದುಬಾರಿ ಹಾಗೂ ಅತ್ಯಂತ ಹಳೆಯದಾದ ಕಾಂಡೋಮ್ ಬಗ್ಗೆ ನಿಮಗೆ ತಿಳಿಸುತ್ತೇವೆ. ಈ ದುಬಾರಿ ಕಾಂಡೋಮ್ ಬೆಲೆಯಲ್ಲಿ ಒಂದು ಐಪೋನ್ ಖರೀದಿಸಬಹುದು. ಈ ವಿಚಾರ ಕೇಳಿದರೆ ನಿಮಗೆ ಶಾಕ್ ಆಗಬಹುದು. ಜಗತ್ತಿನಲ್ಲಿ ಇಷ್ಟು ದುಬಾರಿ ಬೆಲೆಯ ಕಾಂಡೋಮ್ ಸಹ ಇದೆ. ಹಾಗಾದ್ರೆ ಇದು ಎಲ್ಲಿದೆ? ಇದರ ಬೆಲೆ ಎಷ್ಟು? ಯಾಕಿಷ್ಟು ದುಬಾರಿ ಎಂಬುದರ ನಾವು ಹೇಳುತ್ತೇವೆ. 


ಈ ಫೋಟೋದಲ್ಲಿರೋದು ಅತಿ ದುಬಾರಿ ಬೆಲೆ ಮತ್ತು ಅತ್ಯಂತ ಹಳೆಯದಾದ ಕಾಂಡೋಮ್ ಆಗಿದೆ. ಇದು ಸುಮಾರು 200 ವರ್ಷಗಳಷ್ಟು ಹಳೆಯದಾಗಿದ್ದು, ಸ್ಪೇನ್‌ನ ನಗರವೊಂದರ ಬಾಕ್ಸ್‌ನಲ್ಲಿ ಪತ್ತೆಯಾಗಿತ್ತು. 200 ವರ್ಷಗಳಷ್ಟು ಹಳೆಯದಾದ ಕಾಂಡೋಮ್‌ನ್ನು ಆಸ್ಟರ್ಮ್ ಎಂಬ ವ್ಯಕ್ತಿ ಹರಾಜಿನಲ್ಲಿ 42,500 ರೂಪಾಯಿ ನೀಡಿ ಖರೀದಿಸಿದ್ದಾನೆ. ಅಂದಿನಿಂದ ಇದಕ್ಕೆ ಜಗತ್ತಿನ ಅತಿ ದುಬಾರಿ ಬೆಲೆ ಕಾಂಡೋಮ್ ಎಂಬ ಹೆಸರನ್ನು ಪಡೆದುಕೊಂಡಿದೆ. 


ಇದು ಸುಮಾರು 19 ಸೆಂಟಿ ಮೀಟರ್ ಉದ್ದವಿದೆ. 200 ವರ್ಷಗಳ ಹಿಂದೆ ಶ್ರೀಮಂತರು ಗರ್ಭನಿರೋಧಕಕ್ಕಾಗಿ ಈ ರೀತಿಯ ಕಾಂಡೋಮ್‌ ಬಳಕೆ ಮಾಡುತ್ತಿದ್ದರು. ಈ ಕಾಂಡೋಮ್ ಅನ್ನು ಕುರಿಗಳ ಕರುಳಿನಿಂದ ತಯಾರಿಸಲಾಗುತ್ತದೆ. ಈ ಕಾಂಡೋಮ್ ತಯಾರಿಸಲು ಸಾಕಷ್ಟು ಸಮಯ ಬೇಕಾಗುತ್ತಿತ್ತು. 19ನೇ ಶತಮಾನದ ನಂತರ ರಬ್ಬರ್ ಮಾದರಿಯ ಕಾಂಡೋಮ್‌ಗಳನ್ನು ಪರಿಚಯಿಸಲಾಯ್ತು.