ಪುತ್ರನ ಬರ್ತ್‌ಡೇ ಪಾರ್ಟಿಯಲ್ಲಿಯೇ ಹೃದಯಾಘಾತದಿಂದ ಮಹಿಳೆ ಮೃತ್ಯು - ಆತಂಕಕಾರಿ ವೀಡಿಯೋ ವೈರಲ್



ಅಹಮದಾಬಾದ್‌: ಇತ್ತೀಚಿನ ವರ್ಷಗಳಲ್ಲಿ ಹೃದಯ ಹೃದ್ರೋಗಗಳಿಗೆ ಬಹಳಷ್ಟು ಮಂದಿ ಬಲಿಯಾಗುತ್ತಿದ್ದಾರೆ. ಯುವ ಜನತೆಯೇ ಅತಿ ಹೆಚ್ಚು ಮಂದಿ ಬಲಿಯಾಗುತ್ತಿರುವುದು ಆತಂಕಕಾರಿ ವಿಚಾರ. ಇದೀಗ ಮಹಿಳೆಯೊಬ್ಬರು ತಮ್ಮ ಪುತ್ರನ ಬರ್ತ್‌ಡೇ ಪಾರ್ಟಿಯಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಯಾಮಿನಿಬೆನ್ ಎಂದು ಗುರುತಿಸಲಾಗಿದ್ದು, ತಮ್ಮ ಪುತ್ರ ಗೌರಿಕ್‌ನ ಬರ್ತ್‌ಡೇ ಸೆಲೆಬ್ರೇಷನ್‌ನಲ್ಲಿ ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ಇವರು ಭಾಗಿಯಾಗಿದ್ದರು. ಈ ವೇಳೆ ಯಾಮಿನಿಬೆನ್ ಹೃದಯಾಘಾತವಾಗಿ ದಿಢೀರ್ ಎಂದು ಕುಸಿದುಬಿದ್ದು ಮೃತಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

ವೈರಲ್‌ ಆಗಿರುವ ವಿಡಿಯೋದಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಮಾತನಾಡುತ್ತಿರುವ ಯಾಮಿನಿಬೆನ್ ತಮ್ಮ ಪುತ್ರನನ್ನು ಇನೊಬ್ಬರ ಕೈಗೆ ಕೊಡುತ್ತಾರೆ. ಬಳಿಕ ಅಲ್ಲಿದ್ದವರೊಂದಿಗೆ ಮಾತನಾಡುತ್ತಿರುವ ಯಾಮಿನಿ ವೇದಿಕೆ ಇಳಿಯಲು ಮುಂದಾದಾಗ ದಿಢೀರ್ ಎಂದು ಕುಸಿದು ಬೀಳುತ್ತಾರೆ. ತಕ್ಷಣ ಯಾಮಿನಿ ಅವರನ್ನು ಪತಿ ಹಾಗೂ ಅಲ್ಲಿದ್ದವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಗುಜರಾತ್‌ನ ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಂಬನಿ ಮಿಡಿದಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu