ಆ ರೀತಿ ನೋಡಿದ್ರೆ ಮೋದಿ, ನಿರ್ಮಲ ಸೀತರಾಮನ್ ರಾಜೀನಾಮೆ ಕೊಡಬೇಕು; CM ಸಿದ್ದರಾಮಯ್ಯ ( VIDEO)

 



ಆ ರೀತಿ ನೋಡಿದ್ರೆ ಮೋದಿ, ನಿರ್ಮಲ ಸೀತರಾಮನ್ ರಾಜೀನಾಮೆ ಕೊಡಬೇಕು; CM ಸಿದ್ದರಾಮಯ್ಯ





*ಜಾಮೀನಿನ ಮೇಲೆ ಹೊರಗಿರುವ ಕುಮಾರಸ್ವಾಮಿ ರಾಜಿನಾಮೆ ನೀಡಲಿ*

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,17 ಎ ಪ್ರಕಾರ ಎಫ್ ಐ ಆರ್  ದಾಖಲು ಮಾಡಿ, ತನಿಖೆ ಮಾಡುತ್ತಾರೆ . ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಚುನಾವಣಾ ಬಾಂಡ್ ಸಂಬಂಧಿಸಿದಂತೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆಯೂ ಎಫ್ ಐ ಆರ್ ದಾಖಲಿಸಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಅವರು ರಾಜಿನಾಮೆ ಕೊಡುತ್ತಾರೆಯೇ ?  ಎಂದು ಪ್ರಶ್ನಿಸಿದರು.ಬಿಜೆಪಿಯವರು, ಸಿಎಂ ರಾಜಿನಾಮೆ ಕೊಡುತ್ತಾರೆ ಎನ್ನುತ್ತಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಮೊದಲು ಕುಮಾರಸ್ವಾಮಿಯವರು ರಾಜಿನಾಮೆ ನೀಡಲಿ.  ಚುನಾವಣಾ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ಮೋದಿಯವರೂ ರಾಜಿನಾಮೆ ನೀಡಬೇಕಾಗುತ್ತದೆ ಎಂದರು.



BREAKING NEWS
Loading latest news...
Join our WhatsApp Channel Powered By : Online Pudu