ಸಲ್ಮಾನ್ ಖಾನ್ ಬಳಿಯಿದೆ ಹೊಚ್ಚಹೊಸ ಡೈಮಂಡ್ ವಾಚ್ : 714ವಜ್ರಗಳಿರುವ ಇದರ ಬೆಲೆ ಎಷ್ಟುಗೊತ್ತೇ?


ಮುಂಬೈ: ನಟ-ನಟಿಯರಿಗೆ ಕಾರು, ಬೈಕ್ ಹಾಗೂ ಐಷಾರಾಮಿ ವಿಲ್ಲಾ ಮೇಲಿನ ಕ್ರೇಜ್ ಹೊಸದೇನೆಲ್ಲ. ಅದರಲ್ಲೂ ಬಾಲಿವುಡ್ ನಟ-ನಟಿಯರಂಥೂ ದುಬಾರಿ ಬೆಲೆಬಾಳುವ ಹೊಸ ಹೊಸ ವಸ್ತುಗಳನ್ನು ಖರೀದಿಸಿ ಅಥವಾ ಧರಿಸಿ ಆಗಾಗ ಸುದ್ದಿಯಾಗುತ್ತಾರೆ. ಇದೀಗ, ಬಾಲಿವುಡ್ ನಟ ಸಲ್ಮಾನ್ ಖಾನ್ ಬಹುಮೌಲ್ಯದ ಡೈಮಂಡ್ ವಾಚ್ ಧರಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. 


ಸಲ್ಮಾನ್ ಖಾನ್ ಅಮೆರಿಕ ಮೂಲದ ಪ್ರತಿಷ್ಠಿತ ಜೇಕಬ್ ಅರೋಬಾ ಕಂಪೆನಿಯ 'ಬಿಲಿಯನೇರ್ 3' ಡೈಮಂಡ್ ವಾಚ್ ಧರಿಸಿ ಕ್ಯಾಮರಾಕ್ಕೆ ಪೋಸ್ ನೀಡಿದ್ದಾರೆ. ಕಂಪೆನಿಯ ಮಾಲೀಕ ಜೇಕಬ್ ಅರೋಬಾ ಸ್ವತಃ ಸಲ್ಮಾನ್‌ಗೆ ವಾಚ್ ಕಟ್ಟುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ. 'ಇದುವರೆಗೂ ಬಿಲಿಯನೇರ್ ವಾಚ್ ಅನ್ನು ನಾನು ಯಾರಿಗೂ ಕಟ್ಟಲು ಪ್ರಯತ್ನಿಸಲಿಲ್ಲ. ಆದರೆ, ಸಲ್ಮಾನ್‌ಗೆ ಈ ವಿನಾಯಿತಿ ನೀಡಿದ್ದೇನೆ' ಎಂದು ಜೇಕಬ್ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 

ಈ ಡೈಮಂಡ್ ವಾಚ್ ಸರಣಿಯ ಬೆಲೆ ಅಂದಾಜು 48 ಕೋಟಿ ರೂ.ನಿಂದ 167 ಕೋಟಿ ರೂ. ಇರಬಹುದು ಎನ್ನಲಾಗಿದೆ. ಈ ವಾಚ್‌ನಲ್ಲಿ 152 ಎಮರಾಲ್ಡ್ ಕಟ್ ವಜ್ರಗಳು, 57 ಬ್ಯಾಗೇ ಕಟ್ ಹಾಗೂ ಬ್ರೇಸ್‌ಲೈಟ್‌ಗೆ 504 ಬಿಳಿ ಎಮರಾಲ್ಡ್ ಕಟ್ ಡೈಮಂಡ್‌ಗಳು ಸೇರಿ ಒಟ್ಟು 714 ಡೈಮಂಡ್‌ಗಳಿವೆ ಎನ್ನಲಾಗಿದೆ. 
BREAKING NEWS
Loading latest news...
Join our WhatsApp Channel Powered By : Online Pudu