ಚಿತ್ರ ಮಂದಿರದ ಮಹಿಳೆಯರ ಶೌಚಾಲಯದಲ್ಲಿ ವಿಡಿಯೊ: ಇಬ್ಬರು ಬಾಲಕರ ಬಂಧನ
ಬೆಂಗಳೂರು: ನಗರದ ಊರ್ವಶಿ ಚಿತ್ರಮಂದಿರದ ಮಹಿಳೆಯರ ಶೌಚಾಲಯದ ಕಿಟಕಿಯಲ್ಲಿ ಮೊಬೈಲ್ ಇರಿಸಿ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಬಾಲಕರನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 10ರಂದು ಯುವತಿಯೊಬ್ಬರು ‘ಭೀಮ’ ಚಿತ್ರವನ್ನು ವೀಕ್ಷಿಸಲು ಎಚ್. ಸಿದ್ದಯ್ಯ ರಸ್ತೆಯ ಚಿತ್ರಮಂದಿರಕ್ಕೆ ತೆರಳಿದ್ದರು. ಸಿನಿಮಾದ ಮಧ್ಯಂತರ ವಿರಾಮದ ಅವಧಿಯಲ್ಲಿ ಶೌಚಾಲಯಕ್ಕೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಬಾಲಕರಿಬ್ಬರು ಶೌಚಾಲಯದ ಕಿಟಕಿಯಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡುತ್ತಿದ್ದರು ಎಂದು ಆಕೆ ಪೊಲೀಸರಿಗೆ ತಿಳಿಸಿದರು.
‘ಯುವತಿಯು ಒಳಕ್ಕೆ ಶೌಚಾಲಯದ ಹೋದಾಗ ಆರೋಪಿಗಳ ಕೈ ನೆರಳು ಬಿದ್ದಿರುವುದನ್ನು ಗಮನಿಸಿದ್ದರು. ಬಳಿಕ ಅವರು ಪರಿಶೀಲನೆ ನಡೆಸಿದಾಗ ಕಿಟಕಿಯೊಳಗೆ ಕೈ ಹಾಕಿ ಮೊಬೈಲ್ ಮೂಲಕ ಚಿತ್ರೀಕರಣ ಮಾಡುತ್ತಿರುವುದು ಕಂಡುಬಂದಿತ್ತು’ ಎಂದು ಪೊಲೀಸರು ಹೇಳಿದರು.