ಮೂಡಬಿದಿರೆ: ಯುವತಿಯ ಮೇಲೆ ಕೈ ಹಾಕಿದ ಯುವಕ ಬಂಧನ | AREST



ಮಂಗಳೂರು: ಯುವತಿಯೊಬ್ಬಳ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಮೂಡಬಿದಿರೆ ಪೊಲೀಸರು 21 ವರ್ಷದ ಅರ್ಷದ್ ಎಂಬಾತನನ್ನು  ಬಂಧಿಸಿದ್ದಾರೆ. 


ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಮೂಡಬಿದಿರೆಯ ಪ್ರಾಂತ್ಯ ಗ್ರಾಮದ ಟೈಲರ್ ಅಂಗಡಿಯೊಂದಕ್ಕೆ ಹೋಗುತ್ತಿದ್ದಾಗ, ತನ್ನ ಕ್ಲಾಸ್‌ಮೇಟ್ ಆಗಿದ್ದ ಅರ್ಷದ್ ತನ್ನನ್ನು ಅಡ್ಡಗಟ್ಟಿ "ನೀನು ನನ್ನನ್ನು ಯಾಕೆ ಪ್ರೀತಿಸುತ್ತಿಲ್ಲ" ಎಂದು ಕೇಳಿದನು. ಆ ಬಳಿಕ ಆತ ತನ್ನ ಮೈ ಮೇಲೆ ಕೈ ಹಾಕಲು ಬಂದ ಎಂದು ಆರೋಪಿಸಿ, ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾಳೆ.


ಘಟನೆ ನಡೆದಾಗ ಯುವತಿ ಬೊಬ್ಬೆ ಹೊಡೆದ ಕೂಡಲೇ ಟೈಲರ್ ಹೊರಬಂದಾಗ, ಆರೋಪಿ ಸ್ಥಳದಿಂದ ಓಡಿಹೋದನೆಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳೆಯನ್ನು ಅಡ್ಡಗಟ್ಟಿ ಕಿರುಕುಳ ನೀಡಿದ ಪ್ರಕರಣದನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ಮೂಲತಃ ಇರುವೈಲಿನವನಾದ ಅರ್ಷದ್, ಮೂಡುಬಿದಿರೆ ಕೊಡಂಗಲ್ಲು ಪಿಲಿಪಂಜರ ಎಂಬಲ್ಲಿದ್ದು, ಬಳಿಕ ಕೋಟೆಬಾಗಿಲಿನಲ್ಲಿ ಬಾಡಿಗೆ ಮನೆಯಲ್ಲಿರುವುದಾಗಿ ತಿಳಿದುಬಂದಿದೆ. ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ಕೆಲವು ಸಮಯದ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ಇದ್ದು, ಗುರುವಾರ ಬಟ್ಟೆ ಹೊಲಿಸಲೆಂದು ಟೈಲರ್ ಅಂಗಡಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.


BREAKING NEWS
Loading latest news...
Join our WhatsApp Channel Powered By : Online Pudu