ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

16 ವರ್ಷದ ಬಾಲಕಿ ತಂದೆಯಿಂದಲೇ ಹಲವು ಬಾರಿ ಅತ್ಯಾಚಾರ




ಠಾಣೆ : 16 ವರ್ಷದ ಬಾಲಕಿ ಮೇಲೆ ಆಕೆಯ 54 ವರ್ಷ ವಯಸ್ಸಿನ ತಂದೆ ಹಲವು ಬಾರಿ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಬದ್ಲಾಪುರ ಪಟ್ಟಣದಲ್ಲಿ ಈ ಕುಕೃತ್ಯ ನಡೆದಿದೆ.


ಆರೋಪಿಯು ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧಕಾರ್ಯ ನಡೆದಿದೆ. ತಂದೆಯ ಕೃತ್ಯದಿಂದ ಭಯಗೊಂಡಿದ್ದ ಬಾಲಕಿ ಮನೆಯಿಂದ ಓಡಿಹೋಗಿದ್ದು, ನಂತರ ವಾಪಾಸಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಬದ್ಲಾಪುರ ಪಟ್ಟಣದ ಪೂರ್ವ ಠಾಣೆಗೆ ಸೋಮವಾರ ಬಂದ ಬಾಲಕಿಯು ತನ್ನ ತಂದೆಯ ವಿರುದ್ಧ ದೂರು ನೀಡಿದ್ದಾಳೆ. ಆ ಪ್ರಕಾರ ಪೊಲೀಸರು ಅತ್ಯಾಚಾರ, ಹಲ್ಲೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಪೋಕ್ಸೊ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ.