-->
1000938341
ಕೋಟಾ ರಾಜೀನಾಮೆಯಿಂದ ತೆರವಾದ ಪರಿಷತ್ ಸ್ಥಾನ: ಹೈಕಮಾಂಡ್ ಮಟ್ಟದಲ್ಲಿ ನಳಿನ್ ಲಾಬಿ!

ಕೋಟಾ ರಾಜೀನಾಮೆಯಿಂದ ತೆರವಾದ ಪರಿಷತ್ ಸ್ಥಾನ: ಹೈಕಮಾಂಡ್ ಮಟ್ಟದಲ್ಲಿ ನಳಿನ್ ಲಾಬಿ!

ಕೋಟಾ ರಾಜೀನಾಮೆಯಿಂದ ತೆರವಾದ ಪರಿಷತ್ ಸ್ಥಾನ: ಹೈಕಮಾಂಡ್ ಮಟ್ಟದಲ್ಲಿ ನಳಿನ್ ಲಾಬಿ!

ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕಮಗಳೂರು ಕ್ಷೇತ್ರದಿಂದ ಕೋಟಾ ಶ್ರೀನಿವಾಸ ಪೂಜಾರಿ ಜಯಭೇರಿ ಬಾರಿಸಿದ್ದು, ರಾಜ್ಯ ವಿಧಾನಪರಿಷತ್‍ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ಧಾರೆ.


ಅವರ ರಾಜೀನಾಮೆಯಿಂದ ತೆರವಾದ ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗಲಿದ್ದು, ಈ ಸ್ಥಾನಕ್ಕೆ ಬಿಜೆಪಿ ಪಾಳಯದಿಂದ ಸ್ಪರ್ಧೆ ನಡೆಸಲು ಹಲವರಿಂದ ಭಾರೀ ತಯಾರಿ ನಡೆದಿದೆ.


ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರೂ ಈ ಸ್ಥಾನಕ್ಕೆ ಲಾಬಿ ನಡೆಸಿದ್ದು, ಹೈಕಮಾಂಡ್ ಮಟ್ಟದಲ್ಲಿ ಟಿಕೆಟ್ ಗಳಿಸಲು ಶತಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.


ನಳಿನ್ ಅವರಿಗೆ ಈ ಪ್ರಯತ್ನದಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಇದು ಅವರ ಇದುವರೆಗಿನ ರಾಜಕೀಯ ಬದುಕಿನ ಅಳಿವು-ಉಳಿವಿನ ಪ್ರಶ್ನೆಯಾಗಿದೆ.


ಇದೇ ವೇಳೆ, ನಳಿನ್ ಅವರ ಲಾಬಿಗೆ ಪಕ್ಷದ ಮುಖಂಡರೇ ಕೊಕ್ಕೆ ಹಾಕಿದ್ದಾರೆ. ಇದುವರೆಗೆ ನಳಿನ್ ಅವರು ಸಾಕಷ್ಟು ಅಧಿಕಾರ ಉಂಡಿದ್ದಾರೆ. ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.


ಪಕ್ಷದಲ್ಲಿ ಅವರಿಗಿಂತಲೂ ಸಮರ್ಥ ಅಭ್ಯರ್ಥಿಗಳು ಸಾಕಷ್ಟು ಮಂದಿ ಇದ್ದು, ಅವರಿಗೂ ಅವಕಾಶ ಕಲ್ಪಿಸುವಂತೆ ಪಕ್ಷದ ಸ್ಥಳೀಯ ನಾಯಕರು ಒತ್ತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.


Ads on article

Advertise in articles 1

advertising articles 2

Advertise under the article