-->
1000938341
ಮಗುವಿಗೆ ಕೈದಿ ಬಟ್ಟೆ ತೊಡಿಸಿ ದರ್ಶನ್ ಕೈದಿ ನಂಬರ್ ಹಾಕಿ ಫೋಟೊ ಶೂಟ್ - ಹುಚ್ಚು ಅಭಿಮಾನಿಗೆ ನೋಟಿಸ್‌ ನೀಡಲು ಮುಂದಾದ ಮಕ್ಕಳ ಹಕ್ಕುಗಳ ಆಯೋಗ

ಮಗುವಿಗೆ ಕೈದಿ ಬಟ್ಟೆ ತೊಡಿಸಿ ದರ್ಶನ್ ಕೈದಿ ನಂಬರ್ ಹಾಕಿ ಫೋಟೊ ಶೂಟ್ - ಹುಚ್ಚು ಅಭಿಮಾನಿಗೆ ನೋಟಿಸ್‌ ನೀಡಲು ಮುಂದಾದ ಮಕ್ಕಳ ಹಕ್ಕುಗಳ ಆಯೋಗ


ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ ಬಳಿಕ ಅವರ ಮೇಲಿರುವ ಹುಚ್ಚು ಅಭಿಮಾನದಿಂದ ಫ್ಯಾನ್ಸ್ ದರ್ಶನ್‌ಗೆ ನೀಡಲಾದ ವಿಚಾರಣಾಧೀನ ಕೈದಿ ನಂಬರನ್ನು ವಾಹನ ನಂಬರ್ ಆಗಿಸುವ ಹಾಗೂ ಟ್ಯಾಟು ಹಾಕಿಸಿಕೊಳ್ಳುವ ಅಪಾರ ಅಭಿಮಾನ ಮರೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಅಂಧಾಭಿಮಾನಿಯೋರ್ವನಿಗೆ ಮಕ್ಕಳ ಹಕ್ಕುಗಳ ಆಯೋಗ ನೋಟಿಸ್‌ ನೀಡಲು ಸಿದ್ಧತೆ ನಡೆಸಿದೆ.

ದರ್ಶನ್ ಅವರಿಗೆ ವಿಚಾರಣಾಧೀನ ಕೈದಿ ನಂಬರ್ 6106 ಕೊಟ್ಟಿದ್ದಾರೆ. ಅಭಿಮಾನಿಯೊಬ್ಬನು ತನ್ನ ಒಂದು ವರ್ಷದ ಮಗುವಿಗೆ ಕೈದಿ ಬಟ್ಟೆ ತೊಡಿಸಿ ಅದೇ ಕೈದಿ ನಂಬರ್ ಅನ್ನು ಅಂಗಿಗೆ ಹಾಕಿ ಫೋಟೋ ಶೂಟ್ ಮಾಡಿಸಿದ್ದಾನೆ. ಇದೀಗ ಈ ಅಭಿಮಾನಿಗೆ ಮಕ್ಕಳ ಹಕ್ಕುಗಳ ಆಯೋಗ ನೋಟಿಸ್‌ ನೀಡಲು ಸಿದ್ಧತೆ ನಡೆಸಿದೆ.

ಒಂದು ವರ್ಷದ ಮಗುವಿಗೆ ಬಿಳಿ ಬಟ್ಟೆ ಹಾಕಿಸಿ. ಕೈದಿ ನಂಬ‌ರ್ 6106 ನಂಬರ್ ಹಾಕಿ, ಕೈ ಕೋಳ ಮಾದರಿ, ಖೈದಿಗಳ ರೀತಿ ಬಿಳಿ ಬಟ್ಟೆ ಹಾಕಿ ಫೋಟೊಶೂಟ್ ಮಾಡಿಸಿದ್ದಾರೆ. ದರ್ಶನ್ ಮೇಲಿನ ಅಭಿಮಾನದಿಂದಾಗಿ ಅವರು ಮಗುವಿಗೆ ಜೈಲು ಬಟ್ಟೆ ಹಾಕಿಸಿ ಜೈ ಡಿ ಬಾಸ್ ಎಂದು ಬರೆದು ಫೋಟೋಶೂಟ್ ಮಾಡಿಸಿದ್ದಾರೆ. ಸದ್ಯ ಈ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಒಂದಿಷ್ಟು ಮಂದಿ ದರ್ಶನ ಅವರ ಮೇಲಿರುವ ಅವರ ಅಭಿಮಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವರು ಇದು ಹುಚ್ಚು ಅಭಿಮಾನ ಎಂದಿದ್ದಾರೆ.

ಮಗುವಿಗೆ ಕೈದಿ ಬಟ್ಟೆ ಹಾಕಿಸಿ ಪೋಟೋಶೂಟ್ ಮಾಡಿದ್ದ ಪೋಷಕರಿಗೆ ಮಕ್ಕಳ ಹಕ್ಕುಗಳ ಆಯೋಗ ಬಿಗ್ ಶಾಕ್ ನೀಡಿದ್ದು, ನೋಟಿಸ್‌ ನೀಡಲು ಮುಂದಾಗಿದೆ. ಈಗಾಗಲೇ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಆಯೋಗವು ಮಗುವಿಗೆ ಕೈದಿ ಬಟ್ಟೆ ಹಾಕಿರುವುದು ತಪ್ಪು ಹೀಗಾಗಿ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article