-->
1000938341
ಮಂಗಳೂರು ನಗರದಲ್ಲಿ ಜು. 5, 6 ರಂದು ವಿವಿಧೆಡೆ ವಿದ್ಯುತ್‌ ನಿಲುಗಡೆ

ಮಂಗಳೂರು ನಗರದಲ್ಲಿ ಜು. 5, 6 ರಂದು ವಿವಿಧೆಡೆ ವಿದ್ಯುತ್‌ ನಿಲುಗಡೆ
ಮಂಗಳೂರು:  ಲೈಟ್‌ಹೌಸ್‌ ಹಿಲ್‌ ರೋಡ್ ಫೀಡರ್‌ ಮಾರ್ಗ ವ್ಯಾಪ್ತಿಯ ವಿವಿಧೆಡೆ ಜು. 5ರಂದು ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.


ಕದ್ರಿ 33/11ಕೆ.ವಿ.  ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಲೈಟ್‌ಹೌಸ್‌ ಹಿಲ್‌ ರೋಡ್ ಫೀಡರ್‌ನಲ್ಲಿ ಅಂದು ಬೆಳಗ್ಗೆ 10 ರಿಂದ ಸಂಜೆ ಸಂಜೆ 4 ಗಂಟೆಯವರೆಗೆ ತುರ್ತು ನಿರ್ವಹಣಾ

ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ  ಬಂಟ್ಸ್‌‌ ಹಾಸ್ಟೆಲ್, ಜ್ಯೋತಿ, ಲೈಟ್‌ ಹೌಸ್‌ ಹಿಲ್‌ ರೋಡ್‌, ವುಡ್‌ ಲ್ಯಾಂಡ್‌, ಗೋಲ್ಡ್‌ ಫಿಂಚ್‌, ಜ್ಯೋತಿ ಟಾಕೀಸ್‌, ಲೇಡಿಸ್‌ ಕ್ಲಬ್‌, ಸೈಂಟ್‌ ಅಲೋಶಿಯಸ್‌ ಕಾಲೇಜ್  ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.


 ಕುಲಶೇಖರ 110/33/11 ಕೆ.ವಿ. ಉಪಕೇಂದ್ರ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಶುಕ್ರವಾರ (ಜುಲೈ 5) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಅಗಲಿದೆ.


ಈ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ನಾಗುರಿ (ಎಕ್ಕೂರು) ಫೀಡರ್‌‌ ಮತ್ತು 11 ಕೆ.ವಿ. ಪಂಪ್‌ವೆಲ್ ಫೀಡರ್‌ ನಲ್ಲಿ ಶುಕ್ರವಾರ  ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್. ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.


ಅದುದರಿಂದ ಆ ದಿನ ಬೆಳಗ್ಗೆ 10 ರಿಂದ ಸಂಜೆ ಸಂಜೆ 5  ಗಂಟೆಯವರೆಗೆ ಮರೋಳಿ, ಪಡೀಲ್‌, ಅಳಪೆ, ಮೇಘನಗರ, ನಾಗುರಿ, ಗರೋಡಿ, ನೇತ್ರಾವತಿ ಬಡಾವಣೆ, ಪಂಪ್‌ವೆಲ್‌, ಕಪಿತಾನಿಯೊ, ರೆಡ್‌ಬಿಲ್ಡಿಂಗ್‌, ರೈಲ್ವೇಸ್ಟೇಷನ್‌, ಕ್ವಾಡ್‌ ಸೆಂಟರ್‌, ಇಂಡಿಯಾನ ಹಾಸ್ಪಿಟಲ್‌, ನಿಟ್ಟೆ ಎಜುಕೇಷನ್‌ ಸೆಂಟರ್‌, ಮಹಾವೀರ ಸರ್ಕಲ್‌ ಪಂಪ್‌ವೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.ಅಡ್ಯಾರ್,ಕಣ್ಣೂರು: ಜು.6 ರಂದು ವಿದ್ಯುತ್‌ ನಿಲುಗಡೆ


ಕುಲಶೇಖರ 110/33/11 ಕೆ.ವಿ. ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಅಡ್ಯಾರ್ ಫೀಡರ್‌‌ ಮತ್ತು 11 ಕೆ.ವಿ. ಕಣ್ಣೂರು ಫೀಡರ್‌ನಲ್ಲಿ  ಜು. 6 ರಂದು ಬೆಳಗ್ಗೆ 10 ರಿಂದ ಸಂಜೆ ಸಂಜೆ 5 ಗಂಟೆಯವರೆಗೆ 

ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್. ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಅಂದು  ಅಡ್ಯಾರ್‌ಕಟ್ಟೆ, ವಳಚ್ಚಿಲ್‌, ವಳಚ್ಚಿಲ್‌ ಪದವು, ಅಡ್ಯಾರ್‌ ಪದವು, ಮೇರ್ಲಪದವು, ಅರ್ಕುಳ, ಮೇರೆಮಜಲು, ತುಪ್ಪೆಕಲ್ಲು,

ಕಣ್ಣೂರು, ಕೊಡಕ್ಕಲ್‌, ಬಲ್ಲೂರು ಹಾಗೂ ಸುತ್ತಮುತ್ತಲಿನ ವಿದ್ಯುತ್‌  ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article