ಎಲ್ಲರ ಹೊಟ್ಟೆಯಲ್ಲಿ ಜಂತು ಹುಳಗಳು ಸಾಮಾನ್ಯವಾಗಿ ಇರುತ್ತವೆ ಜಂತು ಹುಳಗಳು ಹೆಚ್ಚಾದರೆ ಮಾತ್ರ ಆರೋಗ್ಯಕ್ಕೆ ಒಳ್ಳೆಯದಲ್ಲ ಜಂತು ಹುಳು ಹೆಚ್ಚಾದಂತೆಅಲರ್ಜಿ ಹೊಟ್ಟೆ ನೋವಿಂತಹ ಹಲವು ಸಮಸ್ಯೆಗಳು ಉಂಟಾಗುತ್ತದೆ ಹಾಗಾಗಿ ಜಂತು ಹುಳವನ್ನು ನಿಯತ್ರಿಸುವುದು ಒಳ್ಳೆಯದು.
ಹೊಟ್ಟೆ ಹುಳುವಾದರೆ ಕಾಣಿಸಿಕೊಳ್ಳುವ ಲಕ್ಷಣಗಳ
• ಹೊಟ್ಟೆ ಉಬ್ಬರ
• ಹಸಿವು
• ತೂಕ ಇಳಿಕೆ
• ಹೊಟ್ಟೆ ನೋವು
• ಅತಿಸಾರ
• ವಾಂತಿ ಮತ್ತು ವಾಕರಿಕೆ
•ಜ್ವರ ಮತ್ತು ಒಣ ಕೆಮ್ಮು
• ರಕ್ತಹೀನತೆ
• ಮೂತ್ರ ವಿಸರ್ಜನೆ ವೇಳೆ ನೋವು ಕಾಣಿಸಿಕೊಳ್ಳುತ್ತದೆ
ಜಂತು ಹುಳಗಳು ನಿರ್ವಹಣೆಗೆ ಇಲ್ಲಿದೆ ಕೆಲವು ಟಿಪ್ಸ್
ಸಿಹಿಗುಂಬಳದ ಹಸಿಬೀಜವನ್ನು ಜಜ್ಜಿ ರಸ ತೆಗೆದು ಕುಡಿದರೆ ಹುಳಗಳೆಲ್ಲಾ ಮಲದ ಮುಖಾಂತರ ಹೊರಟುಹೋಗುತ್ತವೆ.
ನುಗ್ಗೇಕಾಯಿಯ ಹೂವನ್ನು ಜಜ್ಜಿ ರಸ ತೆಗೆದು ಕುಡಿದರೆ ಜಂತುಹುಳುಗಳು ಸಾಯುತ್ತವೆ.
ಪರಂಗಿ ಹಣ್ಣಿನ ಬೀಜಗಳನ್ನು ನುಂಗುವುದರಿಂದ ಜಂತುಹುಳುಗಳು ನಾಶವಾಗುತ್ತವೆ.
ಕಡಲೆಕಾಳು ಗಾತ್ರದ ಇಂಗನ್ನು ಬೇವಿನ ಸೊಪ್ಪಿನ ರಸದಲ್ಲಿ ಸೇರಿಸಿ ಸೇವಿಸಿದರೆ ಮಲದೊಂದಿಗೆ ಜಂತುಹುಳುಗಳು ಬೀಳುವುವು.
ಪರಂಗಿ ಹಣ್ಣಿನ ಬೀಜವನ್ನು 2ಚಮಚದಷ್ಟು ಹಾಗೆಯೇ ನುಂಗಿದರೆ ಅಥವಾ ಬೀಜವನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಸಕ್ಕರೆ ಸೇರಿಸಿ ಸೇವಿಸಿದರೆ ಜಂತುಹುಳುಗಳು ಕಡಿಮೆಯಾಗುತ್ತವೆ.