ನಳಿನ್ ಕುಮಾರ್ ಕಟೀಲ್ ವಿರುದ್ದ ಸುಳ್ಳು ಸಂದೇಶ: ದೂರು ದಾಖಲು

 


ಮಂಗಳೂರುಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿರುದ್ದ ಸುಳ್ಳು ಸಂದೇಶ ರವಾನಿಸುತ್ತಿರುವ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ.

 

ಉದ್ಯಮಿಮಾಜಿ ಸಂಸದರ ಆಪ್ತರಾದ ಸೀತಾರಾಮ ರೈ ಕೆದಂಬಾಡಿಗುತ್ತು  ಬಗ್ಗೆ ದೂರು ನೀಡಿದ್ದಾರೆಅಝೀಜ್ ಹಾಗೂ ಇತರರು ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧವಾಗಿ ಸಾಮಾಜಿಕ ಜಾಲತಾಣವಾದ ವಾಟ್ಸಪ್ನಲ್ಲಿ ತಪ್ಪು ಸಂದೇಶ ರವಾನಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

 

ಮೇ 14 ಬೆಳಗ್ಗಿನಿಂದ ವಾಟ್ಸಪ್ ನಲ್ಲಿ ನಿರಂತರವಾಗಿ ಮಾಜಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ವಿರುದ್ದ ಮಾನಹಾನಿಯಾಗುವಂತೆ ಸಂದೇಶವನ್ನು ಹರಿಯಬಿಡಲಾಗಿದೆ.

 

ಅಜೀಜ್ ಎಂಬಾತ ಪ್ರವೀಣ್ ನೆಟ್ಟಾರ್ ಹತ್ಯೆಗೆ ಬಿಗ್ ಟ್ವಿಸ್ಟ್ಹಣ ನೀಡಿ ಕೊಲೆ ಮಾಡಿಸಿದ ನಳಿನ್ ಕುಮಾರ್ ಕಟೀಲ್ ` ಎಂಬಿತ್ಯಾದಿ ಸಂದೇಶಗಳನ್ನು ರವಾನಿಸುತ್ತಿದ್ದಾನೆಪ್ರಸಾದ್ ಕೆಎಂಬಾತನಿಂದಲೂ  ವಿಚಾರದ ಬಗ್ಗೆ ಪ್ರಚಾರವಾಗುತ್ತಿದೆನಳಿನ್ ಕುಮಾರ್ ಕಟೀಲ್ ಅವರ ತೇಜೋವಧೆ ಮಾಡಲು ಹಲವಾರು ಜನರು ಪ್ರಯತ್ನಿಸುತ್ತಿರುವುದು ಕಂಡು ಬರುತ್ತದೆಮಾಜಿ ಸಂಸದರ ವಿರುದ್ಧ ಮಾನಹಾನಿಕರವಾದ ಸಂದೇಶಗಳನ್ನು ರವಾನಿಸುತ್ತಿರುವುದರಿಂದ ಅವರ ಅಭಿಮಾನಿ ಬಳಗಕ್ಕೆ ತುಂಬಾ ನೋವುಂಟಾಗಿರುತ್ತದೆ ಬಗ್ಗೆ ತತ್ ಕ್ಷಣ ಪರಿಶೀಲನೆ ಮಾಡಿ ಮಾನಹಾನಿಕರ ಸಂದೇಶಗಳನ್ನು ರವಾನಿಸುವವರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ.

 

BREAKING NEWS
Loading latest news...
Join our WhatsApp Channel Powered By : Online Pudu