ಬಸ್ಸಿನೊಳಗೆ ಜೋಡಿಯಿಂದ ನಾಚಿಕೆ ಬಿಟ್ಟು ರೊಮ್ಯಾನ್ಸ್ - ಚುಂಬನ, ಹಸಿಬಿಸಿ ದೃಶ್ಯದ ವೀಡಿಯೊ ವೈರಲ್



ಭುವನೇಶ್ವರ್: ಬಸ್ಸಿನೊಳಗೆ ಕಡೆಯ ಸೀಟ್ ನಲ್ಲಿ ಕುಳಿತು ಜೋಡಿಯೊಂದು ನಾಚಿಕೆ ಬಿಟ್ಟು ರೊಮ್ಯಾನ್ಸ್ ನಲ್ಲಿ ತೊಡಗಿದ್ದ ಘಟನೆ ಒಡಿಶಾದ ರೂರ್ಕೆಲಾದಲ್ಲಿ ನಡೆದಿದೆ. ಪ್ರಯಾಣಿಕರೊಬ್ಬರು ಇದನ್ನು ರೆಕಾರ್ಡ್ ಮಾಡಿದ್ದು, ಇದರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯುವಕನಿಗೊರಗಿ ಕುಳಿತುಕೊಂಡಿರುವ ಯುವತಿ ತುಟಿಗೆ ತುಟಿಒತ್ತಿ ರೊಮ್ಯಾನ್ಸ್ ನಲ್ಲಿ ತೊಡಗಿದ್ದಾಳೆ. ಆಕೆಯನ್ನು ಆತನೂ ಬಿಗಿದಪ್ಪಿ ದೀರ್ಘವಾಗಿ ಚುಂಬಿಸಿದ್ದಾನೆ‌. ಬಳಿಯಲ್ಲಿ ಮಹಿಳೆಯೊಬ್ಬರು ಕುಳಿತಿದ್ದರೂ ನಾಚಿಕೆಬಿಟ್ಟು ಈ ಜೋಡಿ ಸಭ್ಯತೆ ಮೀರಿ ವರ್ತಿಸಿದ್ದಾರೆ. ಇದನ್ನು ನೋಡಿ ಮುಜುಗರದಿಂದ ಪಕ್ಕದಲ್ಲಿದ್ದ ಮಹಿಳೆ ಸೆರಗಿನಿಂದ ಮುಖ ಮುಚ್ಚಿಕೊಳ್ಳುವುದು ವೀಡಿಯೋದಲ್ಲಿ ಸೆರೆಯಾಗಿದೆ. ಬಸ್ಸಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ವಿಡಿಯೋ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಸ್ವಾತಂತ್ರ್ಯ ಇದೆಯೆಂದು ಎಲ್ಲೆಂದರಲ್ಲಿ ಬೇಕಾಬಿಟ್ಟಿ ವರ್ತಿಸುವುದಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲವಾಗಿ ವರ್ತಿಸಬಾರದು. ಈ ಬಗ್ಗೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ದೆಹಲಿ ಸಾರಿಗೆ ಬಸ್‌ನಲ್ಲಿ ನಡೆದಿದೆ ಎಂದು ವೈರಲ್ ಆಗಿತ್ತು. ಆದರೆ ಇದು ಅಸಲಿಗೆ ಒಡಿಶಾದ ರೂರ್ಕೆಲಾದಲ್ಲಿ ನಡೆದ ಘಟನೆಯೆಂದು ಒಡಿಶಾ ಜನ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಬೆಂಗಳೂರು ಮೆಟ್ರೋ, ದೆಹಲಿ ಮೆಟ್ರೋಗಳಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಸಾರ್ವಜನಿಕವಾಗಿ ಭಾರಿ ಆಕ್ರೋಶ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸಾರಿಗೆ ಬಸ್‌ನಲ್ಲಿ ಈ ಘಟನೆ ನಡೆದಿದೆ.