-->
1000938341
ಮಂಗಳೂರು: ನೀರುತುಂಬಿದ ತೋಡಿಗೆ ಉರುಳಿದ ಆಟೊರಿಕ್ಷಾ ಚಾಲಕ ದುರ್ಮರಣ - ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಜೀವಬಲಿ

ಮಂಗಳೂರು: ನೀರುತುಂಬಿದ ತೋಡಿಗೆ ಉರುಳಿದ ಆಟೊರಿಕ್ಷಾ ಚಾಲಕ ದುರ್ಮರಣ - ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಜೀವಬಲಿ

ಮಂಗಳೂರು: ಮಹಾನಗರ ಪಾಲಿಕೆಯ ನಿರ್ಲಕ್ಯಕ್ಕೆ ಮೊದಲ ಮಳೆಗೆ ಜೀವವೊಂದು ಬಲಿಯಾದ ಘಟನೆ ಮಂಗಳೂರು ಮಂಗಳೂರಿನ ಕೊಟ್ಟಾರ ಅಬ್ಬಕ್ಕನಗರದಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಅಬ್ಬಕ್ಕನಗರದ ತೋಡು ಭರ್ತಿ ನೀರು ಹರಿದಿದೆ.  ರಸ್ತೆಗೆ ಸಮಾನವಾಗಿ ನೀರು ಹರಿಯುತ್ತಿದ್ದ ಪರಿಣಾಮ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾ ಉರುಳಿ ತೋಡಿಗೆ ಬಿದ್ದಿದೆ‌. ತೋಡು ಭರ್ತಿ ನೀರಿದ್ದ ಪರಿಣಾಮ ಆಟೋಚಾಲಕ, ಸ್ಥಳೀಯ ನಿವಾಸಿ ದೀಪಕ್ (40) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ‌.

ಧಾರಾಕಾರ ಮಳೆಗೆ ರಸ್ತೆಗೆ ಸಮಾನವಾಗಿ ತೋಡು ಭರ್ತಿ ನೀರು ಹರಿಯುತ್ತಿದ್ದ ಪರಿಣಾಮ ರಿಕ್ಷಾ ಉರುಳಿ ಬಿದ್ದಿದೆ. ರಿಕ್ಷಾ ತೋಡಿನೊಳಗೆ ಕೌಚಿ ಬಿದ್ದ ಪರಿಣಾಮ ಆಟೋಚಾಲಕ ದೀಪಕ್ ನೀರಿನಿಂದ ಮೇಲೆ ಬರಲಾಗದೆ ಮೃತಪಟ್ಟಿರಬಹುದು. ಈ ತೋಡಿಗೆ ಸರಿಯಾಗಿ ತಡೆಗೋಡೆ ನಿರ್ಮಿಸದ ಕಾರಣ ಭಾರೀ ಅನಾಹುತ ಸಂಭವಿಸಿದೆ. ಮಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ‌. ಇನ್ನಾದರೂ ಎಚ್ಚೆತ್ತಲ್ಲಿ ಇನ್ನಷ್ಟು ಜೀವ ಬಲಿಯಾಗೋದು ತಪ್ಪಲಿದೆ.

Ads on article

Advertise in articles 1

advertising articles 2

Advertise under the article