ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಕೆನಡಾದಲ್ಲಿ ಭಾರತೀಯ ಪ್ರಜೆಯ ಹತ್ಯೆ : ಶಂಕಿತ ಆರೋಪಿ ಅರೆಸ್ಟ್

ಟೊರಂಟೊ: ಭಾರತೀಯ ಪ್ರಜೆ ಕುಲ್ವಿಂದ‌ರ್ ಸಿಂಗ್ ಸೊಹಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿಯನ್ನು ಕೆನಡಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಎ.23ರಂದು ವೈಟ್ರಾಕ್ ನಗರದಲ್ಲಿ ಇಬ್ಬರು ಯುವಕರ ನಡುವೆ ಆರಂಭಗೊಂಡ ಮಾತಿನ ಚಕಮಕಿ ಒಬ್ಬನಿಗೆ ಚೂರಿ ಇರಿತದಲ್ಲಿ ಮುಕ್ತಾಯಗೊಂಡಿತ್ತು. ಭಾರತ ಮೂಲದ ಕುಲ್ವಿಂದ‌ರ್ ಸಿಂಗ್ ಚೂರಿ ಇರಿತಕ್ಕೆ ಒಳಗಾಗಿದ್ದ. ಒಂದು ವಾರದ ಕಾರ್ಯಾಚರಣೆಯ ಬಳಿಕ 28 ವರ್ಷದ ಶಂಕಿತ ಆರೋಪಿಯನ್ನು ಬಂಧಿಸಿರುವುದಾಗಿ ಕೆನಡಾ ಪೊಲೀಸರು ಮಾಹಿತಿ ನೀಡಿದ್ದಾರೆ.