-->
1000938341
ವರ್ಷಕ್ಕೆ ನಾಲ್ಕು ಲಕ್ಷ ಸಂಬಳ: ಆದರೆ ವರನಿಗೆ ಮಾತ್ರ ಒಂದು ಕೋಟಿ ಸಂಬಳ ಬೇಕಂತೆ - ಈಕೆಯ ಡಿಮಾಂಡ್ ನೋಡಿದ್ರೆ ದಂಗಾಗೋದು ಖಂಡಿತಾ

ವರ್ಷಕ್ಕೆ ನಾಲ್ಕು ಲಕ್ಷ ಸಂಬಳ: ಆದರೆ ವರನಿಗೆ ಮಾತ್ರ ಒಂದು ಕೋಟಿ ಸಂಬಳ ಬೇಕಂತೆ - ಈಕೆಯ ಡಿಮಾಂಡ್ ನೋಡಿದ್ರೆ ದಂಗಾಗೋದು ಖಂಡಿತಾ

ಮುಂಬೈ: ಹಿಂದೆ ಹುಡುಗಿಗೊಬ್ಬ ಉತ್ತಮ ವರ ಸಿಕ್ಕರೆ ಸಾಕು ಮದುವೆ ಮಾಡಿಬಿಡೋಣ ಎನ್ನುತ್ತಿದ್ದರು ನಮ್ಮ ಹಿರಿಯರು. ಆದರೀಗ ಉತ್ತಮ ನೌಕರಿ, ಕೈತುಂಬಾ ಸಂಬಳ ಇದೆಲ್ಲವನ್ನೂ ನೋಡುತ್ತಾರೆ. ಇದು ಹೆಣ್ಣುಮಕ್ಕಳದ್ದೇ ಡಿಮ್ಯಾಂಡ್ ನ ಕಾಲ. ಒಳ್ಳೆಯ ಹುಡುಗ ಅನ್ನೋದಕ್ಕಿಂತ ಹೆಚ್ಚಾಗಿ ವರ್ಷಕ್ಕೆ 1 ಕೋಟಿ ರೂ. ಸಂಬಳ. ಸರ್ಕಾರಿ ನೌಕರ, ಸ್ವಂತ ಮನೆ ಹೀಗೆ ಹಲವು ಷರತ್ತುಗಳನ್ನು ಮುಂದಿಡುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ತನಗೆ ವರ್ಷಕ್ಕೆ 4 ಲಕ್ಷ ರೂ. ಸಂಬಳ ಬರುತ್ತಿದೆ. ಆದರೆ ಮದುವೆಯಾಗುವ ಗಂಡಿಗೆ ಮಾತ್ರ 1 ಕೋಟಿ ರೂ. ಸಂಬಳ ಇರಲೇಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾಳೆ. 

ತನ್ನನ್ನು ವರಿಸುವ ಯುವಕ ಏನೆಲ್ಲಾ ಮಾಡಿರಬೇಕು, ಹೇಗಿರಬೇಕು ಎಂದು ನೀಡಿರುವ ಡಿಟೇಲ್ಸ್ ಈ ಕೆಳಕಂಡಂತಿದೆ ಗಮನಿಸಿ. ತಾನು ಮದುವೆಯಾಗುವ ಹುಡುಗ ಡಾಕ್ಟರ್ ಅಥವಾ ಚಾರ್ಟೆಡ್ ಅಕೌಂಟೆಂಟ್ ಆಗಿರಬೇಕು ಎಂದಿದ್ದಾಳೆ. ಯುವತಿ ನೀಡಿರುವ ಡಿಟೇಲ್ಸ್ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕೆಲವರು ಈಕೆಗಿರುವ ಸಂಬಳಕ್ಕೂ, ಇಟ್ಟಿರುವ ಡಿಮ್ಯಾಂಡ್‌ಗೂ ಸಂಬಂಧವೇ ಇಲ್ಲ ಎಂದು ಲೇವಡಿ ಮಾಡಿದ್ದಾರೆ.

ಮತ್ತೊಬ್ಬರು, "ಈ ಹುಡುಗಿ ನಿರೀಕ್ಷೆ ಸರಿ ಎಂದೇ ಇಟ್ಟುಕೊಳ್ಳೋಣ. ಇಷ್ಟೊಂದು ಸಂಬಳ ತರುವ ಯುವಕನನ್ನೇ ಮದುವೆಯಾದಳು ಎಂದೇ ತಿಳಿಯೋಣ. ವಿವಾಹವಾದ ಬಳಿಕ ಆತ ಕೆಲಸ ಕಳೆದುಕೊಂಡರೆ ಈಕೆ ಏನು ಮಾಡುತ್ತಾಳೆಂದು ತಿಳಿಯಲು ನನಗೆ ಬಹಳ ಕುತೂಹಲವಿದೆ” ಎಂದು ಹಾಸ್ಯಸ್ಪದವಾಗಿ ಕಮೆಂಟ್ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article