ಬಟ್ಟೆ ಒಗೆಯಲೆಂದು ಜಲಾಶಯಕ್ಕೆ ಹೋಗಿದ್ದ ತಾಯಿ ಮಕ್ಕಳು ನೀರುಪಾಲು


ಕೊಳ್ಳೇಗಾಲ: ಬಟ್ಟೆ ಒಗೆಯಲೆಂದು ಜಲಾಶಯಕ್ಕೆ ಹೋಗಿದ್ದ ತಾಯಿ - ಮಕ್ಕಳು ಸೇರಿದಂತೆ ಮೂವರು ನೀರು ಪಾಲಾಗಿರುವ ಘಟನೆ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.

ಪುದೂರು ಗ್ರಾಮದ ಮೀನಾ (33),ಪವಿತ್ರ(13)ಕೀರ್ತಿ(11) ಮೃತಪಟ್ಟ ದುರ್ದೈವಿಗಳು.

ಪುದೂರು ನಿವಾಸಿಯಾದ ಮೀನಾ ಪುತ್ರಿಯರಾದ ಪವಿತ್ರ, ಕೀರ್ತಿ ಹಾಗೂ ಪುತ್ರ ಸುರೇಂದ್ರರೊಂದಿಗೆ ಗೋಪಿನಾಥಂ ಜಲಾಶಯಕ್ಕೆ ಬಟ್ಟೆ ಒಗೆಯಲು ಹೋಗಿದ್ದಾರೆ. ಬಟ್ಟೆ ತೊಳೆದ ಬಳಿಕ ಬಟ್ಟೆಯನ್ನು ಹಿಂಡಲು ಹೋಗಿ ತಾಯಿ ಮೀನಾ ಆಕಸ್ಮಿಕವಾಗಿ ಕಾಲು ಜಾರಿಬಿದಿದ್ದಾರೆ. ತತ್ ಕ್ಷಣ ಹೆಣ್ಣು ಮಕ್ಕಳಾದ ಕೀರ್ತಿ ಹಾಗೂ ಪವಿತ್ರ ತಾಯಿಯನ್ನು ರಕ್ಷಣೆ ಮಾಡಲು ಹೋಗಿ ಮುಳುಗಿದ್ದಾರೆ. ಸ್ಥಳದಲ್ಲಿಯೇ ಇದ್ದ ಪುತ್ರ ಸುರೇಂದ್ರ ತಂದೆಗೆ ವಿಷಯ ತಿಳಿಸಿ ಕರೆದುಕೊಂಡು ಬರುವಷ್ಟರಲ್ಲಿ ಮೂವರು ನೀರು ಪಾಲಾಗಿದ್ದರು. ನಂತರ ಗ್ರಾಮಸ್ಥರ ಸಹಾಯದಿಂದ ಮೂವರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಈ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu