-->
1000938341
ಬಂಟ್ವಾಳ: ನೇತ್ರಾವತಿ ನದಿಗಿಳಿದ ಬಾಲಕ ನೀರುಪಾಲು

ಬಂಟ್ವಾಳ: ನೇತ್ರಾವತಿ ನದಿಗಿಳಿದ ಬಾಲಕ ನೀರುಪಾಲು

ಬಂಟ್ವಾಳ: ಈಜಲೆಂದು ನೇತ್ರಾವತಿ ನದಿಗೆ ಇಳಿದ ಬಾಲಕನೋರ್ವನು ಮೃತಪಟ್ಟ ಘಟನೆ ಕಡೇಶ್ವಾಲ್ಯ ಸಮೀಪದ ನೆಚ್ಚಬೆಟ್ಟು ಎಂಬಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ಕಡೇಶ್ವಾಲ್ಯ ಸಮೀಪದ ನೆಚ್ಚಬೆಟ್ಟು ನಿವಾಸಿ ಸುಹೈಲ್ (13) ಮೃತಪಟ್ಟ ಬಾಲಕ. ಈತ ಕೆಮ್ಮನ್ ಪಳಿಕೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಶೈಕ್ಷಣಿಕ ವರ್ಷದ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದ.

ನೆಚ್ಚಬೆಟ್ಟುವಿನ ತನ್ನ ಮನೆ ಸಮೀಪದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ಸುಹೈಲ್ ಅಲ್ಲಿಂದ ಸ್ನೇಹಿತರೊಂದಿಗೆ ನೇತ್ರಾವತಿ ನದಿಗೆ ಸ್ನಾನ ಮಾಡಲೆಂದು ತೆರಳಿದ್ದ. ಈ ವೇಳೆ ಆತ ನೀರಿನ ಸೆಳೆತಕ್ಕೆ ಸಿಲುಕಿದ್ದ. ನದಿ ದಡದಿಂದ ಬೊಬ್ಬೆ ಕೇಳಿದ ಹಿನ್ನಲೆಯಲ್ಲಿ ಹತ್ತಿರದಲ್ಲೇ ಕ್ರಿಕೆಟ್ ಆಟವಾಡುತ್ತಿದ್ದ ಯುವಕರು ಸುಹೈಲ್ ನನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ. ಆದರೆ ಅದಾಗಲೇ ಆತ ಮೃತಪಟ್ಟಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article