ಬಿಸಿಲಿನಲ್ಲಿ ಆರೋಗ್ಯದ ರಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ
Friday, March 15, 2024
ಬಿಸಿನ ತಾಪ ಹೆಚ್ಚಾದಂತೆ ಮೈಗ್ರೇನ್ ಅಂತಹ ಸಮಸ್ಯೆ ಹೆಚ್ಚುತ್ತದೆ. ಅದೇ ರೀತಿ ಬಿಸಿಲಿನಲ್ಲಿ ಹೆಚ್ಚು ಕಾಲ ಇರುವುದರಿಂದ ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ. ಹೊರಗೆ ಹೋಗುವಾಗ ಛತ್ರಿ, ಕನ್ನಡಕ, ಕ್ಯಾಪ್ ಮತ್ತು ಸ್ಕಾರ್ಫ್ ಬಳಸಿ. ಇದು ಚರ್ಮವನ್ನು ಸೂರ್ಯನಿಂದ ಸುರಕ್ಷಿತವಾಗಿರಿಸುತ್ತದೆ. ಬೇಸಿಗೆಯಲ್ಲಿ ಸನ್‌ಸ್ಟೀನ್ ಬಳಸುವುದನ್ನು ಮರೆಯಬೇಡಿ.
ದೇಹವನ್ನು ತಂಪಾಗಿ ಇಡೀ
ಸುಡುವ ಶಾಖವನ್ನು ಎದುರಿಸಲು ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿರುವಂತೆ ನೋಡಿಕೊಳ್ಳಿ. ಹೆಚ್ಚು ನೀರು ಕುಡಿಯಿರಿ. ಇದರೊಂದಿಗೆ ಎಳನೀರು, ನಿಂಬೆ ಶರಬತ್ತು, ಮಜ್ಜಿಗೆಯಂತಹ ಆರೋಗ್ಯಕರ ಪಾನೀಯಗಳನ್ನು ಸೇವಿಸಿ.
ಇದು ದೇಹದಲ್ಲಿನ ಎಲೆಕ್ಟೋಲೈಟ್‌ಗಳ ಸಮತೋಲನವನ್ನು ಕಾಪಾಡುತ್ತದೆ.
ಉತ್ತಮ ಊಟ ಮಾಡುವುದು ಉತ್ತಮ
ಬೇಸಿಗೆಯಲ್ಲಿ ಜೀರ್ಣಕ್ರಿಯೆಯು ದುರ್ಬಲವಾಗಬಹುದು. ಅಜೀರ್ಣ, ಆಮ್ಮಿಯತೆ ಮತ್ತು ಮಲಬದ್ಧತೆಯಂತಹ ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಅದಕ್ಕಾಗಿಯೇ ಬೇಸಿಗೆಯಲ್ಲಿ ಯಾವಾಗಲೂ ಜೀರ್ಣವಾಗುವ ಮತ್ತು ಹಗುರವಾದ ಆಹಾರವನ್ನು ಸೇವಿಸಿ. ಮಸಾಲೆಯುಕ್ತ, ಹೆಚ್ಚಿನ ಪ್ರೋಟೀನ್ ಅಥವಾ ಎಣ್ಣೆಯುಕ್ತ ಆಹಾರವನ್ನು ತಪ್ಪಿಸಿ. ಬದಲಾಗಿ, ನಿಮ್ಮ ದೈನಂದಿನ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಪಾಲಕ್, ಸೋರೆಕಾಯಿ, ಟೊಮೆಟೊ, ಸೌತೆಕಾಯಿಯಂತಹ ತರಕಾರಿಗಳನ್ನು ಮತ್ತು ಬೇಸಿಗೆಯಲ್ಲಿ ಸಿಗುವ ಕಲ್ಲಂಗಡಿ, ಕಿತ್ತಳೆ ಮತ್ತು ಪೇರಳೆ ಹಣ್ಣುಗಳನ್ನು ಸೇವಿಸಿ.
ವಿಶ್ರಾಂತಿ ಪಡೆಯಿರಿ :
ಬೇಸಿಗೆಯಲ್ಲಿ ಹೆಚ್ಚಾಗಿ ಸುಸ್ತು ಕೂಡ ಇರುತ್ತದೆ. ದಿನಗಳು ಕಳೆದಂತೆ ಜನರು ಹೆಚ್ಚು ಆಲಸ್ಯವನ್ನು ಅನುಭವಿಸಬಹುದು. ಅದಕ್ಕಾಗಿಯೇ ಬೇಸಿಗೆಯಲ್ಲಿ ಜನರು ಮಧ್ಯಾಹ್ನ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕು. ಊಟದ ನಂತರ ವಿಶ್ರಾಂತಿಯಿಂದ ನಿದ್ದೆ ಮಾಡಿ. ಇದರಿಂದ ನಿಮ್ಮ ಆಯಾಸ ಕಡಿಮೆಯಾಗಿ ದಿನವಿಡೀ ಕೆಲಸ ಮಾಡಲು ಶಕ್ತಿ ನೀಡುತ್ತದೆ
ಚಟುವಟಿಕೆಯಿಂದಿರಿ :
ಬೇಸಿಗೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಹೋಗಿ. ಇದು ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ತಂಪಾದ ಗಾಳಿಯಲ್ಲಿ ನಡೆಯುವ ಮೂಲಕ ಮೂಡ್ ಕೂಡ ಚೆನ್ನಾಗಿರುತ್ತದೆ. ಬಿಪಿ, ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.