ತನ್ನ ನಗುವಿನಿಂದ ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ಅಪ್ಪುವಿನ ಜನ್ಮ ದಿನದ ಅಂಗವಾಗಿ ಅಪ್ಪು ಸವಿಸಿದ ಜೀವನದ ಹಾದಿಯ ಬಗ್ಗೆ ಕೈಗಿಟುಕಿದಷ್ಟು ತಿಳಿಸುವ ಪುಟ್ಟ ಪ್ರಯತ್ನ.
ಪುನೀತ್ ರಾಜ್ ಕುಮಾರ್ ಎಂಬ ಹೆಸರಿದ್ದರೂ ಸಹ ಪ್ರೀತಿಯಾ ಅಪ್ಪು ಆಗಿಯೇ ಎಲ್ಲ ಅಭಿಮಾನಿಗಳ ಮನದಲ್ಲಿ ಅಚ್ಚು ಹಾಕಿಸಿಕೊಂಡಿದ್ದಾರೆ.
.ತಂದೆಗೆ ತಕ್ಕ ಮಗ..
ಕನ್ನಡ ಚಿತ್ರರಂಗದ ದೇವರಾಗಿ ಎಲ್ಲಾ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿರುವ ವರನಟ ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಮುದ್ದಿನ ಕಿರಿಯ
ಮಗನಾಗಿ ಚೆನ್ನೈ ನ ಕಲ್ಯಾಣಿ ಆಸ್ಪತ್ರೆಯಲ್ಲಿ 1975 ಮಾರ್ಚ್ 17 ರಂದು ಜನಿಸಿದರು.
ಅಪ್ಪುವಿನ ಅಣ್ಣಂದಿರು ಅದ ಶಿವರಾಜ್ ಕುಮಾರ್ ಮತ್ತೆ ರಾಘವೇಂದ್ರ ರಾಜಕುಮಾರ್ ಸಹ ಯಶಸ್ವಿ ನಟರಾಗಿ ತನ್ನದೇ ಆದ ರೀತಿಯಲ್ಲಿ ಬೆಳ್ಳಿ ತೆರೆಯಲ್ಲಿ ಛಾಪಾನ್ನು ಮಾಡಿಸಿದ್ದಾರೆ.
ಈ ಮೂರು ಮುತ್ತುಗಳು ತಂದೆ ನಡೆಸಿಕೊಟ್ಟ ಹಾದಿಯಲ್ಲಿ ಸಾಗಿ ತಂದೆಗೆ ತಕ್ಕ ಮಕ್ಕಳಾಗಿದ್ದಾರೆ.
..ಎಲೆ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿಯ ಸರದಾರ..
ಕಾಲಕಾರ ಕುಟುಂಬದಲ್ಲಿ ಜನಿಸಿದ ಕಾರಣದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಅಷ್ಟೊಂದು ಕಷ್ಟ ಆಗುವುದಿಲ್ಲ.
ವಾಟ್ ದೆನ್ ರಾಮನ್ ಎಂಬ ಕಾದಂಬರಿ ಆಧಾರಿತವಾಗಿ ರಚಿಸಿದ ಬೆಟ್ಟ ಹೂ ಸಿನಿಮಾದಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿಯನ್ನ ತನ್ನ ಮುಡಿಗೆ ಏರಿಸಿಕೊಂಡ ಬಾಲ ಕಲಾವಿದ.
ಅಷ್ಟೆ ಅಲ್ಲದೆ ರಾಜ್ ಕುಮಾರ್ ಅವರ ಹತ್ತಕ್ಕೂ ಅಧಿಕ ಸಿನಿಮಾದಲ್ಲಿ ಬಾಲ ಕಲಾವಿದಾನಗಿ ನಟನೆ ಮಾಡಿದ್ದಾರೆ.
ಅಪ್ಪುವಿನ ಸಿನಿಪಯಾಣ
ಅಪ್ಪು ಸಿನಿಮಾದಿಂದ ನಾಯಕ ನಟನಾಗಿ ಬೆಳ್ಳಿ ತೆರೆಗೆ ಕಾಲಿಟ್ಟ ಅಪ್ಪುದಿಂದ ಒಂದರಿಂದ ಒಂದು ಸೂಪರ್ ಹಿಟ್ ಸಿನಿಮಾವನ್ನು ಸ್ಯಾಂಡಲ್ ವುಡ್ ಗೆ ಕೊಡುಗೆ ಆಗಿ ಕೊಟ್ಟಿದಾರೆ.ತಮ್ಮ ನಟನೆಯ ಕಲೆಗೆ ಹತ್ತು ಹಲವು ಪ್ರಶಸ್ತಿಯನ್ನ ಸಹ ಪಡೆದಿದ್ದಾರೆ.
ಪುನೀತ್ ರಾಜಕುಮಾರ್ ಬರೀ ನಟ ಅಲ್ಲದೆ ನಿರ್ಮಾಪಕ,ಗಾಯಕ ,ನಿರೂಪಕ ಆಗಿ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದಾರೆ.
50ಕ್ಕೂ ಅಧಿಕ ಸಿನಿಮಾದಲ್ಲಿ ಹಾಡಿ ಅದರಲ್ಲಿ ಬಂದ ಹಣವನ್ನು ಸಮಾಜ ಸೇವೆ ಸಂಪೂರ್ಣವಾಗಿ ಬಳಸಿ ಎಲ್ಲಾರಿಗೂ ಸ್ಪೂರ್ತಿ ಆಗಿದ್ದಾರೆ.
ಜೊತೆಗಿರದ ಜೀವ ಎಂದಿಗೂ ಜೀವಂತ.
ಎಲ್ಲದಾಗು ಸೈ ಎನಿಸಿಕೊಂಡ ನಟ ಒಮ್ಮೆಲೆ ನಮ್ಮನು ಆಗಲಿ ಹೋಗಿಯೇ ಬಿಡುತ್ತಾರೆ.
ಆಗ ಮಾತ್ರ ಆಕ್ಷರ ಸಹ ಇಡೀ ಕರ್ನಾಟಕ ಅನ್ನೋದಕ್ಕಿಂತ ಇಡೀ ಭಾರತದಲ್ಲಿ ಸ್ಮಶಾನ ಮೌನದಲ್ಲಿ ತುಂಬಿರುತ್ತದೆ.
ದೊಡ್ಡವರು ಹೇಳುವ "ಬದುಕಿ ಸಾಯುದಾಕ್ಕಿಂತ ಸತ್ತು ಬದುಕ ಬೇಕು ಲೇಸು" ಎಂಬ ಮಾತಿಗೆ ನಿದರ್ಶನ ಆಗಿದ್ದಾರೆ ಅಪ್ಪು.
ಅಪ್ಪು ವಿನ ಅಂತಿಮ ದರ್ಶನಕ್ಕೆ ಬಂದ ಸಾಗರೋಪದಿಯಲ್ಲಿ ಜನರನ್ನು ನೋಡಿದಾಗಲೇ ತಿಳಿಯುತ್ತದೆ ಬಂಗಾರದ ಮನುಷ್ಯನ ಮಗ ಅಪ್ಪಟ ಬಂಗಾರ ಎಂದು.
ಅಪ್ಪು ಮರಣದ ನಂತರ ನಡೆದದ್ದು ಮಾತ್ರ ಇತಿಹಾಸವೇ ಸರಿ.
ಸಹಸ್ರಾರು ಸಂಖ್ಯೆಯಲ್ಲಿ ಹುಟ್ಟಿದ ಅಭಿಮಾನಿ ಬಳಗಕ್ಕೆ ಅಪ್ಪು ದೇವತಾ ಮನುಷ್ಯನೇ ಸರಿ. ಈಗಲೂ ನಡೆಯುತ್ತಿರುವ ಅ ದೇವತಾ ಮನುಷ್ಯನ ಹೆಸರಿನಲ್ಲಿನ ಸಮಾಜ ಸೇವೆಯೇ ಎಲ್ಲರಿಗೂ ಮಾದರಿ ಆಗಿದೆ.
ನಮ್ಮನು ಆಗಲಿ ಎರಡು ವರ್ಷ ಆದರೂ ಸಹ ಕರುನಾಡ ಜನರ ಮನದಲ್ಲಿ ಇನ್ನೂ ಜೀವಂತವಾಗಿ ಬದುಕಿದ್ದಾರೆ. ಇವರು ಎಲೆ ಮಾರೆ ಕಾಯಿಯಾಂತೆ ಯಾರಿಗೂ ತಿಳಿಯಾದೇ ಮಾಡುತ್ತಿದ್ದ ಜನರ ಸೇವೆಯೇ ಇವರನ್ನು ಸಾವಿರಾರು ಅಭಿಮಾನಿಗಳು ಮನದಲ್ಲಿ ಆರಾಧಿಸುವಂತೆ ಮಾಡಿದೆ.
ಜೊತೆಗೆ ಇರದ ಜೀವ ಎಂದಿಗೂ ಜೀವಂತ
ತೊರೆದು ಇಲ್ಲಿಗೆ ಮೂರು ವರ್ಷಗಳು ಅದರೂ ಸಹ ಕರುನಾಡ ಜನರ ಮನದಲ್ಲಿ ಇನ್ನೂ ಜೀವಂತವಾಗಿ ಬದುಕಿದ್ದಾರೆ. ಇವರು ಎಲೆ ಮಾರೆ ಕಾಯಿಯಾಂತೆ ಯಾರಿಗೂ ತಿಳಿಯಾದೇ ಮಾಡುತ್ತಿದ್ದ ಜನರ ಸೇವೆಯೇ ಇವರನ್ನು ಸಾವಿರಾರು ಅಭಿಮಾನಿಗಳು ಮನದಲ್ಲಿ ಆರಾಧಿಸುವಂತೆ ಮಾಡಿದೆ.
ಜೊತೆಗೆ ಇರದ ಜೀವ ಎಂದಿಗೂ ಜೀವಂತ