ನೀತಾ ಅಂಬಾನಿ ಕತ್ತಿನಲ್ಲಿ ಕಂಗೊಳಿಸುತ್ತಿದ್ದ ನೆಕ್ಲೇಸ್ ಬೆಲೆ ಕೇಳಿದ್ರೆ ದಂಗಾದ್ರು ನೆಟ್ಟಿಗರು


ಮುಂಬೈ: ದೇಶದ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪ್ರೀ-ವೆಡ್ಡಿಂಗ್ ಸಮಾರಂಭ ಇತ್ತೀಚೆಗಷ್ಟೇ ಅದ್ದೂರಿಯಾಗಿ ನೆರವೇರಿದೆ. ದೇಶ-ವಿದೇಶಗಳ ಗಣ್ಯರನೇಕರು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದು, ಅನಂತ್-ರಾಧಿಕಾ ಜೋಡಿಗೆ ಶುಭಹಾರೈಸಿದ್ದರು. 

ಮೂರು ದಿನಗಳ ಕಾಲ ನಡೆದ ಈ ಅದ್ದೂರಿ ಈವೆಂಟ್‌ನಲ್ಲಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕಂಗೊಳಿಸುತ್ತಿದ್ದರು. ಇಡೀ ಕಾರ್ಯಕ್ರಮದಲ್ಲಿ ಅನಂತ್ ಮತ್ತು ರಾಧಿಕಾ ಜೋಡಿ ಮಿಂಚಿದರೆ, ಮತ್ತೊಂದೆಡೆ ಮುಖೇಶ್ ದಂಪತಿ ಕೂಡ ಅತ್ಯಾಕರ್ಷಕವಾಗಿ ಕಂಗೊಳಿಸಿದರು. ಅದರಲ್ಲೂ ನೀತಾ ಅಂಬಾನಿಯಂತೂ ವಿಶಿಷ್ಟವಾಗಿ ಕಾಣಿಸಿತ್ತಿದ್ದರು. ಹೆಸರಾಂತ ವಿನ್ಯಾಸಕ ಮನೀಶ್ ಮಲ್ಲೋತ್ರಾ ಡಿಸೈನ್ ಮಾಡಿದ ಕೈಮಗ್ಗದ ಕಾಂಚೀಪುರಂ ಸೀರೆಯನ್ನು ಧರಿಸುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಸೀರೆ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಅವರ ಕತ್ತಿನಲ್ಲಿ ಕಂಗೊಳಿಸುತ್ತಿದ್ದ ವಜ್ರದ ನೆಕ್ಲೇಸ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ನೀತಾ ಅಂಬಾನಿ ಧರಿಸಿರುವ ಹಸಿರು ಬಣ್ಣದ ನೆಕ್ಸಸ್ ಸದ್ಯ ನೆಟ್ಟಿಗರ ಆಕರ್ಷಣೆಗೆ ಕಾರಣವಾಗಿದೆ. ಇದರ ಬೆಲೆ ಎಷ್ಟಿರಬಹುದು ಎಂಬ ಲೆಕ್ಕಾಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ವರದಿಗಳ ಪ್ರಕಾರ, ನೀತಾ ಧರಿಸಿರುವ ಈ ಒಂದು ನಿರ್ದಿಷ್ಟ ನೆಕ್ಲೇಸ್‌ನ ಅಂದಾಜು ಬೆಲೆ ಬರೋಬ್ಬರಿ 400-500 ಕೋಟಿ ರೂ. ಇದೆ ಎಂದು ಮೂಲಗಳು ತಿಳಿಸಿವೆ. ಈ ಮೊತ್ತವನ್ನು ಕೇಳಿ ನೆಟ್ಟಿಗರು ದಂಗಾಗಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu