-->
1000938341
MANGALORE-  ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ ಕಿರೀಟ ಮುಡಿಗೇರಿಸಿದ ಕಾಲೇಜು ವಿದ್ಯಾರ್ಥಿನಿ

MANGALORE- ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ ಕಿರೀಟ ಮುಡಿಗೇರಿಸಿದ ಕಾಲೇಜು ವಿದ್ಯಾರ್ಥಿನಿ





ಮಂಗಳೂರು: ದೆಹಲಿಯಲ್ಲಿ ನಡೆದ ಮಿಸ್ಟರ್/ಮಿಸಸ್ ಮತ್ತು ಮಿಸ್ ಟೀನ್ ಗ್ಲೋಬಲ್ ವಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಯುವತಿ ಈಶಿಕಾ ಶೆಟ್ಟಿ ಮಿಸ್ ಟೀನ್ ಗ್ಲೋಬಲ್ ವಲ್ಡ್ ಇಂಡಿಯಾ ಓಶಿಯಾನ - 2024 ಕಿರೀಟವನ್ನು ಮುಡಿಗೇರಿಸಿದ್ದಾರೆ.




ಗ್ಲೋಬಲ್ ಇಂಡಿಯಾ ಎಂಟರ್‌ಟೈನ್ ಮೆಂಟ್ಸ್ ಪೊಡಕ್ಷನ್ ಮತ್ತು ಆಲಿ ಶರ್ಮಾ ಜಂಟಿಯಾಗಿ ಆಯೋಜಿಸಿರುವ ಈ ಸೌಂದರ್ಯ ಸ್ಪರ್ಧೆ ದೆಹಲಿಯ ಬಾಲಕಮೋರ ಸ್ಟೇಡಿಯಂನಲ್ಲಿ ಫೆ.22ರಂದು ನಡೆಯಿತು. ಈ ಸೌಂದರ್ಯ ಸ್ಪರ್ಧೆಗೆ ವಿವಿಧ ರಾಜ್ಯಗಳ 65 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಖ್ಯಾತ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತು ಖ್ಯಾತ ಮಾಡೆಲ್, ಮೆಂಟರ್ ಜತಿನ್ ಕಿರ್ಬಾತ್ ಅಂತಿಮ ಸುತ್ತಿನ ಜ್ಯೂರಿಯಾಗಿ ಪಾಲ್ಗೊಂಡಿದ್ದರು.








ಮಂಗಳೂರಿನ ಕಾವೂರಿನ ಶಿವನಗರ ನಿವಾಸಿ ಈಶಿಕಾ ಶೆಟ್ಟಿ ಅಲೋಶಿಯಸ್ ಕಾಲೇಜಿನಲ್ಲಿ ಸೋಶಿಯಾಲಜಿ ಸೋಶಿಯಲ್ ವರ್ಕ್ ನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.




ಮಂಗಳೂರಿನಲ್ಲಿ ನಡೆದ ಆಡಿಷನ್ ನಲ್ಲಿ ಈಶಿಕಾ ಶೆಟ್ಟಿ ಓರ್ವಳೇ ಆಯ್ಕೆಯಾಗಿದ್ದರು. 2022ರಲ್ಲಿ ಮಂಗಳೂರಿನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್‌ ಟೀನ್ ಮಂಗಳೂರು ಆಗಿ ಹಾಗೂ 2023 ರಲ್ಲಿ ಬೆಂಗಳೂರಿನಲ್ಲಿ ಎನ್.ಬಿ.ಮಾಡೆಲಿಂಗ್ ಮ್ಯಾನೇಜ್ ಮೆಂಟ್ ರವರು ನಡೆಸಿರುವ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಟೀನ್ ಕರ್ನಾಟಕ 2023 ಪ್ರಶಸ್ತಿ ಗೆದ್ದಿದ್ದಾರೆ. ಬಾಲ್ಯದಿಂದಲೂ ನಟನೆ, ನೃತ್ಯ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು. ಈಶಿಕಾ ಶೆಟ್ಟಿ ಮಂಗಳೂರಿನ ಎ.ಎಸ್.ಐ ಆಗಿರುವ ಶರತ್ ಕುಮಾರ್ ಶೆಟ್ಟಿ ಹಾಗೂ ಶ್ವೇತಾ ಶರತ್ ಶೆಟ್ಟಿ ದಂಪತಿಯ ಪ್ರಥಮ ಪುತ್ರಿ.

Ads on article

Advertise in articles 1

advertising articles 2

Advertise under the article