ಬಿಸಿನೀರಿನ ಪ್ರಿಯರೇ ಗಮನಿಸಿ, ದಿನ ಬಿಸಿನೀರಿನ ಸ್ನಾನ ಮಾಡುವುದರಿಂದ ಉಂಟಾಗುವ ಅಪಾಯಗಳು ಏನು?
Friday, March 1, 2024
ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಪ್ರಯೋಜನಗಳು ಏಷ್ಟು ಇದೆಯೋ ಹಾಗೆ ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಪ್ರತಿದಿನ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು ಹಾಗಾಗೀ ಬಿಸಿ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು.
ಅನೇಕ ಮಂದಿಗೆ ಬಿಸಿನ ಪ್ರೀಯರು ಇರುತ್ತಾರೆ ಅವರಿಗೆ ಬಿಸಿನೀರು ಇಲ್ಲದೆ ಸ್ನಾನ ಮಾಡುವುದನ್ನು ಕಲ್ಪನೆ ಕೂಡ ಮಾಡಲು ಸಾಧ್ಯವಾಗುವುದಿಲ್ಲ.
ಹಾಗಾದ್ರೆ ಬಿಸಿ ನೀರಿನ ಅತಿಯಾದ ಬಳಕೆ ತರುವ ಆರೋಗ್ಯದ ಸಮಸ್ಯೆಗಳ ಬಗ್ಗೆ ಇಲ್ಲಿದೆ ವಿವರ
* ದಿನನಿತ್ಯಬಿಸಿನೀರಿನ ಸ್ನಾನ ಮಾಡುವುದರಿಂದ ತ್ವಚೆಯ ಜೀವಕೋಶಗಳಿಗೆ ಹಾನಿಯಾಗುವುದು ಅಲ್ಲದೆ ಚರ್ಮವು ಬೇಗನೆ ಮೃದುತಾಣವನ್ನು ಕಳೆದುಕೊಳ್ಳುತ್ತದೆ
* ಮೆದುಳಿನ ಮೇಲೆ ಒತ್ತಡವನ್ನೂ ಉಂಟುಮಾಡುತ್ತದೆ.
* ಹೃದಯದ ಸಮಸ್ಯೆ ಇರುವವರು ಬಿಸಿನೀರಿನೊಂದಿಗೆ ಸ್ನಾನ ಮಾಡುವುದು ಅಪಾಯಕಾರಿ
* ಹೃದಯ ರಕ್ತನಾಳದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
* ಕೂದಲು ಉದರುವುದನ್ನು ಹೆಚ್ಚಿಸುತ್ತದೆ.
* ತಜ್ಞರ ಪ್ರಕಾರ ಬಿಸಿ ನೀರಿನಿಂದ ನಿಯಮಿತವಾಗಿ ಸ್ನಾನ ಮಾಡುವುದರಿಂದ ಪುರುಷ ಫಲವತ್ತತೆ ಕಡಿಮೆಯಾಗುತ್ತದೆ. ಆದ್ದರಿಂದ ಅವರು ಯಾವಾಗಲೂ ತಣ್ಣೀರಿನಿಂದ ಸ್ನಾನ ಮಾಡಬೇಕು.
* ಹಠಾತ್ ಹೃದಯಕ್ಕೆ ಸಂಬಂಧಿಸಿದ ಸಾವಿನ ಅಪಾಯವನ್ನು ಹೆಚ್ಚಿಸಬಹುದು ಎಂದು ಅಧ್ಯಯನಗಳು ತಿಳಿಸಿವೆ. ಚರ್ಮವು ಒರಟಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಹಾಗಾಗಿ ಅಗತ್ಯವಿಲ್ಲದಿದ್ದಲ್ಲಿ ಬ ಉಗುರುಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಲು ತಜ್ಞರು ಶಿಫಾರಸ್ಸು ಮಾಡುತ್ತಾರೆ.
* ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ತಲೆಸುತ್ತು, ದೇಹದ ದೌರ್ಬಲ್ಯ ಹೆಚ್ಚಿಸುತ್ತದೆ
ಒಟ್ಟಾರೆ ಬಿಸಿ ನೀರಿನ ಅತಿಯಾದ ಬಳಕೆಯನ್ನು ನಿಲ್ಲಿಸುವುದು ಉತ್ತಮ