-->
1000938341
ಕೊಹ್ಲಿ ಅಭಿಮಾನಿಗಳಿಗೆ ಶಾಕ್ - ಟಿ20 ವಿಶ್ವಕಪ್‌ ನಲ್ಲಿ ವಿರಾಟ್ ಕೊಹ್ಲಿ ಆಡುವುದು ಅನುಮಾನ

ಕೊಹ್ಲಿ ಅಭಿಮಾನಿಗಳಿಗೆ ಶಾಕ್ - ಟಿ20 ವಿಶ್ವಕಪ್‌ ನಲ್ಲಿ ವಿರಾಟ್ ಕೊಹ್ಲಿ ಆಡುವುದು ಅನುಮಾನ



 ವಿರಾಟ್ ಕೊಹ್ಲಿ ಭಾರತದ ಪ್ರಮುಖ ಆಟಗಾರರಲ್ಲಿ ಒಬ್ಬರು. ಕಳೆದ ಕೆಲವು ವರ್ಷಗಳಿಂದ ಕೊಹ್ಲಿ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದು. 2023ರ ವಿಶ್ವಕಪ್‌ನಲ್ಲಿ ಭಾರತವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ವಿರಾಟ್ ಕೊಹ್ಲಿ ಯ  ಪಾತ್ರ  ಮುಖ್ಯವಾಗಿದೆ ಹಾಗಿರುವಾಗ  ವಿರಾಟ್ ಗೆ ಸಂಬಂಧಿಸಿದಂತೆ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ.

ದಿ ಟೆಲಿಗ್ರಾಫ್ ವರದಿ ಪ್ರಕಾರ, ವಿರಾಟ್ ಕೊಹ್ಲಿ 2024ರ ವಿಶ್ವಕಪ್‌ಗೆ ಆಯ್ಕೆಯಾಗುವುದಿಲ್ಲ ಎಂದು ವರದಿಯಾಗಿದೆ. ಇದನ್ನು ಬಿಸಿಸಿಐ ಪರಿಗಣಿಸಿದೆ ಎನ್ನಲಾಗಿದೆ. 

ಇದರ ಕಾರಣ ಸಹ ಬಹಿರಂಗವಾಗಿದ್ದು, ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಪಿಚ್‌ಗಳು ನಿಧಾನವಾಗಿರುತ್ತವೆ ಮತ್ತು ಅಂತಹ ಪಿಚ್‌ಗಳು ವಿರಾಟ್ ಕೊಹ್ಲಿಗೆ ಹೊಂದಿಕೆಯಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.


ಇದಲ್ಲದೇ ಭಾರತದ ಹಲವು ಯುವ ಆಟಗಾರರು ಈ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಿಂಕು ಸಿಂಗ್, ಶಿವಂ ದುಬೆ, ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರು ಟಿ20ಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಿಸಿಸಿಐ ಇದೀಗ ವಿಶ್ವಕಪ್‌ನಲ್ಲಿ ಕೆಲವು ಯುವ ಆಟಗಾರರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.


ವರದಿಗಳ ಪ್ರಕಾರ, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಟಿ20ಯ ಬ್ಯಾಟಿಂಗ್ ಶೈಲಿಯ ಬಗ್ಗೆ ಕೊಹ್ಲಿಯೊಂದಿಗೆ ಮಾತನಾಡುತ್ತಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವಿರಾಟ್ 16 ಎಸೆತಗಳಲ್ಲಿ 29 ರನ್ ಗಳಿಸಿದರು. ಟಿ20 ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಇನ್ನೂ ಹೆಚ್ಚು ರನ್ ಗಳಿಸಿದ್ದಾರೆ. 4,037 ರನ್ ಗಳಿಸಿದ್ದಾರೆ.ರೋಹಿತ್ ಶರ್ಮಾ 3974 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.ಇದರಿಂದಾಗಿ ಅಂಕಿಅಂಶಗಳು ವಿರಾಟ್ ಪರವಾಗಿವೆ. 

ಆದರೆ ಮುಂದಿನ ಪೀಳಿಗೆ ದಾರಿ ಮಾಡಿಕೊಡಬೇಕು, ಅದನ್ನು ವಿರಾಟ್ ಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಅಜಿತ್ ಅಗರ್ಕರ್ ಮೇಲಿದೆ. ಇನ್ನು, ಮಾರ್ಚ್ ಅಂತ್ಯದಲ್ಲಿ ಐಪಿಎಲ್‌ನಲ್ಲಿ ವಿರಾಟ್ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಕೊಹ್ಲಿ ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ.ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಐಸಿಸಿ ಪಂದ್ಯಾವಳಿಗಳಲ್ಲಿ ಆಡಿದ ಅಪಾರ ಅನುಭವವನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ ಬಗ್ಗೆ, ಜಯ್ ಶಾ ಈಗಾಗಲೇ ಭಾರತಕ್ಕೆ ಟಿ 20 ವಿಶ್ವಕಪ್ ನಾಯಕನಾಗಿರುವುದಾಗಿ ಹೇಳಿದ್ದಾರೆ. 

ಆದರೆ ವಿರಾಟ್ ಕೊಹ್ಲಿ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಬಿಸಿಸಿಐ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ

Ads on article

Advertise in articles 1

advertising articles 2

Advertise under the article