ಮಂಗಳೂರು: ನಿಷೇಧಿತ ಮಾದಕದ್ರವ್ಯ ಮೆಥಾಎಂಪೈಟಮೈನ್ ಮಾರಾಟ - ಆರೋಪಿ ಅರೆಸ್ಟ್
Thursday, February 1, 2024
ಮಂಗಳೂರು: ನಿಷೇಧಿತ ಮಾದಕದ್ರವ್ಯ ಮೆಥಾಎಂಪೈಟಮೈನ್ ಅನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ನಗರದ ಮೇರಿಹಿಲ್ ಹೆಲಿಪ್ಯಾಡ್ ಬಳಿ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಫರಾಜ್ ಬಂಧಿತ ಆರೋಪಿ.
ಆರೋಪಿ ಮೊಹಮ್ಮದ್ ಫರಾಜ್ ಮೇರಿಹಿಲ್ ಹೆಲಿಪ್ಯಾಡ್ ಬಳಿ ಆ್ಯಕ್ಸಿಸ್ ವಾಹನದಲ್ಲಿ ಮೆಥಾಎಂಪೈಟಮೈನ್ ಮಾದಕದ್ರವ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲೆತ್ನಿಸುತ್ತಿದ್ದ. ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಉತ್ತರ ಉಪವಿಭಾಗದ ಡ್ರಗ್ಸ್ ಸ್ಕ್ವಾಡ್ ಸಿಬ್ಬಂದಿ ಮತ್ತು ಕಾವೂರು ಠಾಣಾ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ 7.28 ಗ್ರಾಂ ತೂಕದ 30,000 ರೂ. ಮೌಲ್ಯದ ಮೆಥಾಎಂಪೆಟಮೈನ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೆ ಮಾದಕದ್ರವ್ಯ ಮಾರಾಟ ಮಾಡಲು ಬಳಸಿದ್ದ ಒಂದು ಲಕ್ಷ ರೂ. ಮೌಲ್ಯದ ಸುಜುಕಿ ಎಕ್ಸಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.