ಮಕ್ಕಳ ಜನ್ಮದಿನಕ್ಕೆ ಸರಿಹೊಂದುವ ನಂಬರ್ ನ ಲಾಟರಿ ಖರೀದಿ - 33 ಕೋಟಿ ರೂ. ಬಹುಮಾನ ಗೆದ್ದ ಭಾರತೀಯ

ನವದೆಹಲಿ: ಲಾಟರಿ ಡ್ರಾದಲ್ಲಿ ಭಾರತೀಯ ಮೂಲದ ಯುವಕರೊಬ್ಬರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಜಾಕ್‌ಪಾಟ್ ಹೊಡೆದಿದೆ.‌ ಆತ ಬರೋಬ್ಬರಿ 33 ಕೋಟಿ ರೂ. ಬಹುಮಾನ ಗಳಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಕೇರಳ ಮೂಲದ ರಾಜೀವ್ ಅರಿಕಾಟ್‌ ಎಂಬವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಜಾಕ್‌ಪಾಟ್ ಹೊಡೆದಿದೆ. ಬಿಗ್ ಟಿಕೆಟ್ ನಡೆಸುವ ವಾರದ ಲಾಟರಿ ಡ್ರಾದಲ್ಲಿ ರಾಜೀವ್ ಮೊದಲ ಬಹುಮಾನ ಗೆಲ್ಲುವ ಮೂಲಕ 33 ಕೋಟಿ ರೂ. ತಮ್ಮದಾಗಿಸಿಕೊಂಡಿದ್ದಾರೆ.

ರಾಜೀವ್ ಅರಿಕ್ಕಾಟ್ ಅವರು ಈ ಬಾರಿ ಬಹುಮಾನ ಗೆಲ್ಲುವ ಭರವಸೆಯನ್ನು ಹೊಂದಿದ್ದರಂತೆ. ಆಲ್‌ಐನ್ ನಗರದಲ್ಲಿ ಕಟ್ಟಡ ವಿನ್ಯಾಸ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ರಾಜೀವ್ ಮೊತ್ತವನ್ನು 19 ಜನರೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ಆಶ್ಚರ್ಯಕರ ಸಂಗತಿಯೆಂದರೆ ರಾಜೀವ್‌ಗೆ ಅದೃಷ್ಟ ಖುಲಾಯಿಸಿದ ಟಿಕೆಟ್ ಅವರಿಗೆ ಬಿಗ್ ಟಿಕೆಟ್ ವತಿಯಿಂದ ಆಫರ್ ಲೆಕ್ಕದಲ್ಲಿ ಬಂದಿತ್ತು. ತಮ್ಮಿಬ್ಬರು ಮಕ್ಕಳ ಹುಟ್ಟುಹಬ್ಬದ ದಿನಾಂಕ ಆಧರಿಸಿ ರಾಜೀವ್ 2 ಟಿಕೆಟ್ ಖರೀದಿಸಿದ್ದರು. ಇದಕ್ಕೆ ಪ್ರತಿಯಾಗಿ 4 ಟಿಕೆಟ್ ಉಚಿತವಾಗಿ ನೀಡಲಾಗಿತ್ತು. ಹೀಗೆ ಉಚಿತವಾಗಿ ದೊರೆತ ಟಿಕೆಟ್‌ಗೆ ಇದೀಗ ಬಹುಮಾನ ಬಂದಿದೆ.
BREAKING NEWS
Loading latest news...
Join our WhatsApp Channel Powered By : Online Pudu