-->

ಮಂಗಳೂರು: ಅನುಪಾಲನಾ ವರದಿ ವಿಳಂಬಕ್ಕೆ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನೇ ತರಾಟೆಗೆ ತೆಗೆದುಕೊಂಡ ಎಂಎಲ್ಸಿ ಭೋಜೇಗೌಡ

ಮಂಗಳೂರು: ಅನುಪಾಲನಾ ವರದಿ ವಿಳಂಬಕ್ಕೆ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನೇ ತರಾಟೆಗೆ ತೆಗೆದುಕೊಂಡ ಎಂಎಲ್ಸಿ ಭೋಜೇಗೌಡ

ಮಂಗಳೂರು: ಜಿಲ್ಲಾ ಪಂಚಾಯತ್ ಕೆಡಿಪಿ ಸಭೆ ಅನುಪಾಲನಾ ವರದಿ ಕಳಿಸವುದು ವಿಳಂಬವಾಗಿದೆ ಎಂದು ಎಂಎಲ್ ಸಿ ಜೋಜೇಗೌಡರವರು ಅಧಿಕಾರಿಗಳು ಸೇರಿದಂತೆ ದ.ಕ.ಜಿಲ್ಲಾಧಿಕಾರಿಯವರ ಮೇಲೆಯೇ ಗರಂ ಆಗಿದ್ದಾರೆ.

ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ದ‌.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆದಿದೆ. ಸಭೆ ಆರಂಭವಾಗಿ ಸ್ವಲ್ಪ ಸಮಯ ಆಗುತ್ತಿದ್ದಂತೆ, ಕಳೆದ ಬಾರಿ ನಡೆದ ಕೆಡಿಪಿ ಸಭೆಯ ಅನುಪಾಲನ ವರದಿಯೇ ತನಗೆ ಕಳಿಸಿಲ್ಲ ಎಂದು ಎಂಎಲ್ ಸಿ ಭೋಜೇಗೌಡ ಗರಂ ಆಗಿದ್ದಾರೆ. ಅಧಿಕಾರಿಗಳ ವಿರುದ್ಧ ಕೆಂಡಮಂಡಲರಾದ ಬೋಜೆಗೌಡರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ವಿರುದ್ಧವೇ ತಿರುಗಿ ಬಿದ್ದು, 'ನಿಮ್ಮ ಕೆಲಸವೇನು, ಮೂರು ದಿನಗಳ ಹಿಂದೆ ಕಳಿಸಿದ್ದರೆ, ಅದನ್ನು ಓದುವುದು ಹೇಗೆ?. ಕೆಡಿಪಿ ಸಭೆ ನಡೆದು ಎಷ್ಟು ಸಮಯವಾಯ್ತು?' ಪ್ರಶ್ನಿಸಿದ ಭೋಜೇಗೌಡರು ''ತಪ್ಪಾದ್ರೆ ತಪ್ಪಾಯ್ತು ಎಂದು ನಿಮಗೆ ಹೇಳುವುದಕ್ಕೆ ಏನು?" ಎಂದು ಸಭೆಯ ನಿಯಾಮವಳಿ ಬಗ್ಗೆ ಕಾನೂನು ಪಾಠ ಮಾಡಿದ್ದಾರೆ.
ಇ-ಮೇಲ್ ಮೂಲಕ ಎಲ್ಲಾ ಎಂಎಲ್ಎಗಳಿಗೆ ವರದಿ ಕಳಿಸಿದ್ದೇವೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ ಎಷ್ಟು ದಿನಗಳ ಒಳಗೆ ಕಳಿಸಬೇಕೆಂಬ ನಿಯಮವಿದೆ ಎಂದು ಭೋಜೆಗೌಡರು ಪ್ರಶ್ನಿಸಿದರು‌. ಮುಂದಿನ ಬಾರಿ ಈ ರೀತಿ ಆಗಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಈ ಬಾರಿಯ ಸಭೆ ಆದ ತಕ್ಷಣ ಸಚಿವರ ಸಹಿ ಹಾಕಿಸಿ ಎಲ್ಲರಿಗೂ ಕಳಿಸುತ್ತೇವೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article