ಅಯೋಧ್ಯ ಪ್ರಭು ಶ್ರೀ ರಾಮಚಂದ್ರ ದೇವರ ಪ್ರಾಣ ಪ್ರತಿಷ್ಠೆಯ ನಿಮಿತ್ತ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ರಾಮ ತಾರಕ ಹವನ ನಡೆಸಲಾಯಿತು.
ದೀಪ ಪ್ರಜ್ವಲನೆ ಮುಖಾಂತರ ಪ್ರಾರಂಭ ಗೊಂಡ ಕಾರ್ಯಕ್ರಮವನ್ನು ಗಣೇಶ್ ಶೆಟ್ಟಿ ಜಪುಗುಡ್ಡೆಗುತ್ತು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಮತಾರಕ ಹವನ ನಡೆಯಿತು.
ಇದೇ ಸಂದರ್ಭದಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ನೂರಾರು ಭಕ್ತಾದಿಗಳು, ರಾಮ ಭಕ್ತರು ವೀಕ್ಷಣೆ ಮಾಡಿದರು . ಮಧ್ಯಾಹ್ನ ಸೂರ್ಯನಾರಾಯಣ ದೇವರಿಗೆ ಮಂಗಳಾರತಿ ನಡೆಯಿತು .
 
 
 
 
 
 
 
 
 
 
 
 
 
 
 
 
 
