-->

ಮಾಜಿ ಪ್ರಿಯಕರನನ್ನು ಮತ್ತೆ ತನ್ನ ಬಲೆಗೆ ಬೀಳಿಸಲು ಹೋಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಪ್ರೇಯಸಿ

ಮಾಜಿ ಪ್ರಿಯಕರನನ್ನು ಮತ್ತೆ ತನ್ನ ಬಲೆಗೆ ಬೀಳಿಸಲು ಹೋಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಪ್ರೇಯಸಿ


ಬೆಂಗಳೂರು: ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನನ್ನು ವಶೀಕರಣ ಮಾಡಿಕೊಳ್ಳಲು ಹೋಗಿ ಬರೋಬ್ಬರಿ 8.2 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರು ನಗರದ ಜಾಲಹಳ್ಳಿಯಲ್ಲಿ ನಡೆದಿದೆ.

ಯುವತಿ ಆನ್ ಲೈನ್ ಮೂಲಕ ಸಂಪರ್ಕಿಸಿರುವ ಜ್ಯೋತಿಷಿಯೇ ಆಕೆಗೆ ಮೋಸ ಮಾಡಿದ್ದಾನೆಂದು ತಿಳಿದು ಬಂದಿದೆ. ಈ ಪ್ರಕರಣ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಜ್ಯೋತಿಷಿಗಾಗಿ ಬಲೆ ಬೀಸಿದ್ದಾರೆ.

ಜೋತಿಷಿಯಿಂದ ಮೋಸ ಹೋದ ಯುವತಿ ಓರ್ವ ಯುವಕನನ್ನು ಪ್ರೀತಿಯ ಬಲೆಗೆ ಬಿದ್ದಿದ್ದಳು. ಕಾರಣಾಂತರಗಳಿಂದ ಇಬ್ಬರ ನಡುವೆ ವೈಮನಸ್ಸು ಮೂಡಿ ದೂರವಾಗಿದ್ದರು. ಬ್ರೇಕ್ ಅಪ್‌ನಿಂದ ನೊಂದಿದ್ದ ಯುವತಿ ತಾನು ಪ್ರೀತಿಸುತ್ತಿದ್ದ ಮಾಜಿ ಪ್ರಿಯಕರನನ್ನು ಮಾಟ ಮಂತ್ರ ಅಥವಾ ವಶೀಕರಣದ ಮೂಲಕ ಮತ್ತೆ ತನ್ನ ಬಳಿ ಸೆಳೆಯಲು ಯತ್ನಿಸಿದ್ದಾಳೆ. ಅದಕ್ಕಾಗಿ ತನ್ನ ಸ್ನೇಹಿತನ ಸಹಾಯದಿಂದ ಆನ್‌ಲೈನ್ ಮೂಲಕ ವಶೀಕರಣ ಮಾಡುವ ಜ್ಯೋತಿಷಿಯೊಬ್ಬರನ್ನು ಸಂಪರ್ಕ ಮಾಡಿದ್ದಳು.

ಡಿ.22 ರಂದು ವಶೀಕರಣದ ಮೊದಲ ಹಂತವಾಗಿ ಮಾಜಿ ಪ್ರಿಯಕರ ಹಾಗೂ ಆತನ ಪೋಷಕರ ಮೇಲೆ ಮಾಟಮಂತ್ರದ ಆಚರಣೆಗಳನ್ನು ಮಾಡಲು 2.4 ಲಕ್ಷಗಳನ್ನು ಆನ್ನೈನ್ ನಲ್ಲಿ ಪಾವತಿಸಿದ್ದಳು. ಆ ಬಳಿಕವೂ ಜೋತಿಷಿಯ ಹಣಕಾಸಿನ ಬೇಡಿಕೆಗಳು ನಿಲ್ಲಲಿಲ್ಲ, ಕೆಲವು ದಿನಗಳ ಬಳಿಕ, ಹೆಚ್ಚುವರಿ 1.7 ಲಕ್ಷ ರೂ. ನೀಡಲು ಜ್ಯೋತಿಷಿ ಬೇಡಿಕೆ ಇಟ್ಟಿದ್ದಾನೆ. ಹಣ ನೀಡದಿದ್ದರೆ ಮಾಜಿ ಪ್ರಿಯಕರನಿಗೆ ಈ ವಿಚಾರ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಯುವತಿ ಹೆದರಿ ಒತ್ತಡಕ್ಕೆ ಮಣಿದು ಜನವರಿ 10ರಂದು 4.1 ಲಕ್ಷ ರೂ. ಪಾವತಿಸಿದ್ದಳು.

ಆರ್ಥಿಕ ನಷ್ಟದಿಂದ ಬೇಸತ್ತ ಯುವತಿ ಕೊನೆಗೆ ಪೋಷಕರಿಗೆ ನಡೆದ ವಿಚಾರವನ್ನ ತಿಳಿಸಿದ್ದು, ಜಾಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಆರೋಪಿ ಜ್ಯೋತಿಷಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article