ಆಳ್ವಾಸ್‌ನಲ್ಲಿ ಸಂಭ್ರಮದ ಗಣರಾಜ್ಯೋತ್ಸವ: ಆಳ್ವಾಸ್ ಆವರಣವೇ ಮಿನಿ ಭಾರತ ಎಂದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್
ಆಳ್ವಾಸ್‌ನಲ್ಲಿ ಸಂಭ್ರಮದ ಗಣರಾಜ್ಯೋತ್ಸವ: ಆಳ್ವಾಸ್ ಆವರಣವೇ ಮಿನಿ ಭಾರತ ಎಂದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್
- ಆಳ್ವಾಸ್ ಗಣರಾಜ್ಯೋತ್ಸವ: 30 ಸಾವಿರಕ್ಕೂ ಅಧಿಕ ಮಂದಿ ಭಾಗಿ
- 75ನೇ ಗಣರಾಜ್ಯೋತ್ಸವ ಆಚರಣೆ: ಆಳ್ವಾಸ್‌ನಲ್ಲಿವಿಧಾನಸಭಾಧ್ಯಕ್ಷ ಯು. ಟಿ. ಖಾದರ್
- ಆಳ್ವಾಸ್ ಆವರಣವೇ ಮಿನಿ ಭಾರತ ಎಂದ ಖಾದರ್
75ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಆಳ್ವಾಸ್‌ನಲ್ಲಿ ಕೇಸರಿ ಬಿಳಿ ಹಸಿರು ಬಣ್ಣದ ಅಬ್ಬರವೇ ಜೋರಾಗಿತ್ತು. ಸಾಗರದ ಅಲೆಯಂತೆ ಉಕ್ಕಿ ಬಂದ ದೇಶ ಪ್ರೇಮದ ಭಕ್ತಿ ಮಕ್ಕಳಲ್ಲಿ ಮನೆ ಮಾಡಿತ್ತು.
ಆಳ್ವಾಸ್‌ನಲ್ಲಿ ಈ ಬಾರಿಯ ಗಣರಾಜ್ಯೋತ್ಸವ ಸಂದರ್ಭದಲ್ಲಿ ತ್ರಿವರ್ಣಧ್ವಜ ಅರಳಿಸಿದ್ದು ಕರ್ನಾಟಕ ರಾಜ್ಯ ವಿಧಾನಸಭೆಯ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಸಾಹೇಬರು.
ಗಣರಾಜ್ಯೋತ್ಸವದ "ಅಮೃತ ಕಾಲ"ದ ಅಮೃತ ಘಳಿಗೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಗಿರಿಯ ಆವರಣದಲ್ಲಿ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ಈ ಸಂಭ್ರಮ ಕಂಡುಬಂತು.
ವಂದೇ ಮಾತರಂ ಗಾಯನದ ಬಳಿಕ ವಿಧಾನ ಸಭಾ ಅಧ್ಯಕ್ಷ ಶ್ರೀ ಯು. ಟಿ. ಖಾದರ್ ಅವರು ಧ್ವಜವನ್ನು ಅರಳಿಸಿ ಬಾನೆತ್ತರಕ್ಕೆ ಚಿಮ್ಮಿಸಿದರು. ಸುಂದರ ನಿನಾದದೊಂದಿಗೆ ರಾಷ್ಟ್ರಗೀತೆ ‘ಜನ ಗಣ ಮನ’ ಎಲ್ಲರ ಬಾಯಲ್ಲೂ ಮೊಳಗಿತು.
ಜೊತೆಗೆ ಕೋಟಿ ಕಂಠೋಂ ಸೇ ನಿಖ್ಲೇ... ಎಂಬ ದೇಶಭಕ್ತಿಯ ಹಾಡಿಗೆ ಗಾನಕ್ಕೆ 30 ಸಾವಿರ ಮಂದಿಯೂ ಧ್ವಜಗಳನ್ನು ಬೀಸಿ ದನಿಗೂಡಿಸಿದರು.
ಆಳ್ವಾಸ್ ಮಿನಿ ಭಾರತ ಎಂದು ಬಣ್ಣಿಸಿದ ಯು.ಟಿ. ಖಾದರ್, ಭಾರತದ ಸಂಸ್ಕೃತಿಯ ಸಾರವನ್ನು ನಾವು ಕರ್ನಾಟಕದಲ್ಲಿ ಕಾಣಬಹುದು. ಆದರೆ, ಕರ್ನಾಟಕದ ಸಾಂಸ್ಕೃತಿಕ ಸಾರವನ್ನು ನಾವೆಲ್ಲ ಆಳ್ವಾಸ್‌ನಲ್ಲಿ ನೋಡಬೇಕು. ಆಳ್ವಾಸ್ ನಮ್ಮ ಸಂಸ್ಕೃತಿ ಬಿಂಬಿಸುವ ಮಿನಿ ಭಾರತ ಎಂದು ಮುಕ್ತ ಕಂಠದಿಂದ ಪ್ರಶಂಸಿಸಿದರು.
ಆಳ್ವಾಸ್' ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಡಾ. ಎಂ. ಮೋಹನ ಆಳ್ವ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಬಿ. ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಹಾಗೂ ಸುಮಾರು 250ಕ್ಕೂ ಅಧಿಕ ಮಂದಿ ನಿವೃತ್ತ ಸೇನಾನಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.