ಕ್ರಿಕೆಟ್ ಆಟವಾಡುತ್ತಿದ್ದಾಗ ಹೃದಯಾಘಾತ- 22 ವರ್ಷದ ಯುವಕ ಸಾವು



ಮಧ್ಯಪ್ರದೇಶ:  ಕ್ರಿಕೆಟ್​ ಆಡುತ್ತಿದ್ದಾಗ 22 ವರ್ಷದ ಯುವಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಶನಿವಾರ ನಡೆದಿದೆ.


ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಬಲ್ವಾಡ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಕೂಟ್ ಗ್ರಾಮದಲ್ಲಿ ಸಂಜೆಯ ವೇಳೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಇಂದಲ್ ಸಿಂಗ್ ಜಾಧವ್ ಬಂಜಾರಾ ಎಂಬ ಯುವಕ ಬೌಲಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ಅಸ್ವಸ್ಥರಾಗಿದ್ದಾರೆ. ಮೈದಾನದಲ್ಲೇ ಕೆಲ ಹೊತ್ತು ವಿಶ್ರಾಂತಿ ಪಡೆದರು. ನಂತರ ಸಹ ಆಟಗಾರರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಜಾಧವ್ ಕೊನೆಯುಸಿರೆಳೆದರು.


"ಬಂಜಾರಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಮುನ್ನವೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ" ಎಂದು ಬದ್ವಾಹ್ ಆಸ್ಪತ್ರೆಯ ಡಾ.ವಿಕಾಸ್ ತಲ್ವೇರ್ ಹೇಳಿದ್ದಾರೆ


"ಯುವಕ ಬರ್ಖಾಡ್ ತಾಂಡಾ ಗ್ರಾಮದ ತಂಡಕ್ಕಾಗಿ ಆಡುತ್ತಿದ್ದರು. ಮೊದಲು ಬ್ಯಾಟಿಂಗ್​ ಮಾಡಿದ ಈ ತಂಡವು 70 ರನ್​ ಕಲೆಹಾಕಿತ್ತು. ಎರಡನೇ ಇನ್ನಿಂಗ್ಸ್​​ನಲ್ಲಿ ಬೌಲಿಂಗ್​ ಮಾಡುವಾಗ ಬಂಜಾರಾ ಅಸ್ವಸ್ಥರಾದರು. ಎದೆನೋವು ಎಂದು ಹೇಳಿ ಕೆಲಕಾಲ ಕುಳಿತುಕೊಂಡರು. ಬಳಿಕ ತಂಡದ ಆಟಗಾರರು ಹತ್ತಿರದ ಬದ್ವಾಹ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ಶಾಲಿಗ್ರಾಮ್ ಗುರ್ಜರ್ ಎಂಬವರು ತಿಳಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu