ಕಾಟೇರ 1 ಕೋಟಿ ಟಿಕೆಟ್ ಮಾರಾಟ -3 ವಾರದಲ್ಲಿ ಒಂದೇ ಭಾಷೆಯಲ್ಲಿ ₹206 ಕೋಟಿ ಕಲೆಕ್ಷನ್
Saturday, January 20, 2024
ದರ್ಶನ್ ನಟನೆಯ 'ಕಾಟೇರ' ಚಿತ್ರದ 1 ಕೋಟಿ ಟಿಕೆಟ್‌ಗಳು ಮಾರಾಟವಾಗಿವೆ. ಕನ್ನಡ ಭಾಷೆಯೊಂದರಲ್ಲೇ ಬಿಡುಗಡೆಯಾದ ಈ ಸಿನಿಮಾ ಮೂರು ವಾರಗಳಲ್ಲಿ ದಾಖಲೆಯ 206 ಕೋಟಿ ರು. ಕಲೆಕ್ಷನ್ ಮಾಡಿದೆ.
ಚಿತ್ರತಂಡ ಹಾಗೂ ದರ್ಶನ್ ಅಭಿಮಾನಿಗಳು ಈ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ. 'ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿ 1 ಕೋಟಿಗೂ ಅಧಿಕ ಟಿಕೆಟ್‌ಗಳು ಮಾರಾಟಗೊಂಡ ಏಕೈಕ ಚಿತ್ರ ಕಾಟೇರ' ಎಂದು ಚಿತ್ರತಂಡ ಹೇಳಿಕೊಂಡಿದೆ.
ಮೂರನೇ ವಾರದಲ್ಲಿ ಸಿನಿಮಾ 49.38 ಕೋಟಿ ರು. ಗಳಿಕೆ ಮಾಡಿದೆ. ಸಾಲು ಸಾಲು ರಜೆಗಳು ಇದ್ದದ್ದು ಇದಕ್ಕೆ ಪ್ರಮುಖ ಕಾರಣ. ಮುಂದಿನ ವಾರವೂ ಸಾಲು ಸಾಲು ರಜೆಗಳಿರುವುದು ಚಿತ್ರದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಈ ಸಿನಿಮಾಕ್ಕೆ ಆರಾಧನಾ ನಾಯಕಿ. ಕುಮಾರ್ ಗೋವಿಂದ್, ಜಗಪತಿ ಬಾಬು, ಶ್ರುತಿ, ವೈಜನಾಥ ಬಿರಾದಾರ್ ಮೊದಲಾದವರು ನಟಿಸಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ.