ಮಂಗಳೂರು: ಪಾಂಡೇಶ್ವರ ಅಗ್ನಿಶಾಮಕ ದಳದ ಕಂಪೌಂಡ್ ನೊಳಗೆ ಮುಳ್ಳುಹಂದಿ ಪ್ರತ್ಯಕ್ಷ - ಸಿಬ್ಬಂದಿಯಿಂದ ರಕ್ಷಣೆ

ಮಂಗಳೂರು: ನಗರದ ಪಾಂಡೇಶ್ವರ ಅಗ್ನಿಶಾಮಕ ದಳದ ಕಂಪೌಂಡ್ ನೊಳಗೆ ಶುಕ್ರವಾರ ಬೆಳ್ಳಂಬೆಳಗ್ಗೆ ಮುಳ್ಳುಹಂದಿಯೊಂದು ಪ್ರತ್ಯಕ್ಷವಾಗಿದ್ದು, ಅದನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.

ಶುಕ್ರವಾರ ಬೆಳಗ್ಗೆ 8.30ರ ವೇಳೆಗೆ ಈ ಮುಳ್ಳುಹಂದಿ ಪಾಂಡೇಶ್ವರ ಅಗ್ನಿಶಾಮಕ ದಳದ ಕಂಪೌಂಡ್ ನೊಳಗೆ ನೋಡಲು ಸಿಕ್ಕಿದೆ. ಅದನ್ನು ಗಮನಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೃಷ್ಣ ಹಂಡಾರವರು ಶ್ವಾನ ರಕ್ಷಣೆ ಮಾಡುವ ಬಲೆಯ ಮೂಲಕ ಹಿಡಿದಿದ್ದಾರೆ. ಬಳಿಕ ಅದನ್ನು  ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.

BREAKING NEWS
Loading latest news...
Join our WhatsApp Channel Powered By : Online Pudu