ಪತ್ನಿ, ಇಬ್ಬರು ಮಕ್ಕಳಿಗೆ ಇಂಜೆಕ್ಷನ್ ನೀಡಿ ಸುತ್ತಿಗೆಯಿಂದ ಬಡಿದು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಡಾಕ್ಟರ್


ಲಕ್ನೋ: ರೈಲ್ವೆಯಲ್ಲಿ ಉದ್ಯೋಗಕ್ಕಿದ್ದ ವೈದ್ಯರೊಬ್ಬರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯ ರೈಲ್ವೇಸ್ ಕಾಲನಿಯಲ್ಲಿ ನಡೆದಿದೆ.

ವೈದ್ಯ ಡಾ.ಅರುಣ್ ಕುಮಾರ್‌, ಪತ್ನಿ ಅರ್ಚನಾ, ಪುತ್ರಿ ಆದಿವಾ ಮತ್ತು ಪುತ್ರ ಆರವ್ ಮೃತದೇಹ ಪತ್ತೆಯಾದವರು.

ರೈಲ್ವೆಯಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕಣ್ಣಿನ ತಜ್ಞ ಡಾ.ಅರುಣ್ ಕುಮಾರ್‌  ರಾಯ್ ಬರೇಲಿಯಲ್ಲಿರುವ ಮಾಡರ್ನ್ ರೈಲು ಕೋಚ್ ಫ್ಯಾಕ್ಟರಿಯಲ್ಲಿ ಕರ್ತವ್ಯಲ್ಲಿದ್ದರು. ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ರಾಯ್ ಬರೇಲಿಯ ರೈಲ್ವೇ ಕ್ವಾಟ್ರಸ್ ನಲ್ಲಿ ವಾಸವಾಗಿದ್ದರು.

ಆದರೆ ಭಾನುವಾರದ ಬಳಿಕ ಇವರ ಮನೆಯವರು ಯಾರೂ ನೆರೆಹೊರೆಯವರಿಗೆ ಕಾಣಸಿಕ್ಕಿರಲಿಲ್ಲ. ಆದ್ದರಿಂದ ಅನುಮಾನಗೊಂಡ ಅಕ್ಕಪಕ್ಕದ ಮನೆಯವರು ಹಾಗೂ ವೈದ್ಯರ ಸಹೋದ್ಯೋಗಿಗಳು ಮನೆಯ ಬಳಿ ಬಂದು ನೋಡಿರದಿದ್ದರೂ ಯಾವ ಸದ್ದೂ ಇರಲಿಲ್ಲ. ಆದರೆ ಮನೆಯ ಒಳಗಿನಿಂದ ಬಾಗಿಲು ಹಾಕಿತ್ತು ಇದನ್ನು ಕಂಡು ಸಂಶಗೊಂಡ ಸಹೋದ್ಯೋಗಿಗಳು ಮನೆಯ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಆಗ ವೈದ್ಯ ಡಾ.ಅರುಣ್ ಕುಮಾರ್‌, ಪತ್ನಿ ಅರ್ಚನಾ, ಪುತ್ರಿ ಆದಿವಾ ಮತ್ತು ಪುತ್ರ ಆರವ್ ಮೃತದೇಹವಾಗಿ ಪತ್ತೆಯಾಗಿದ್ದಾರೆ.

ತಕ್ಷಣ ಅವರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೋಲೀಸರು ಬಂದು ಪರಿಶೀಲನೆ ನಡೆಸಿದಾಗ ಮೃತದೇಹದ ಬಳಿ ಸುತ್ತಿಗೆ, ರಕ್ತದ ಕಲೆಗಳು ಮತ್ತು ಡ್ರಗ್ಸ್ ಇಂಜೆಕ್ಷನ್‌ಗಳು ಪತ್ತೆಯಾಗಿದೆ‌. ವೈದ್ಯರು ಮೊದಲು ಮಕ್ಕಳು ಹಾಗೂ ಪತ್ನಿಗೆ ಅಮಲು ಬರುವ ಇಂಜೆಕ್ಷನ್ ನೀಡಿ ಬಳಿಕ ಸುತ್ತಿಗೆಯಿಂದ ಬಡಿದು ಹತ್ಯೆಗೈದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಹೆಚ್ಚಿನ ವಿವರ ಸಿಗಲಿದೆ ಎಂದು ರಾಯ್ ಬರೇಲಿ ಎಸ್ಪಿ ಅಲೋಕ್ ಪ್ರಿಯದರ್ಶಿ ಹೇಳಿದ್ದಾರೆ.

ನೆರೆಹೊರೆಯವರ ಪ್ರಕಾರ ಕೌಟುಂಬಿಕ ಸಮಸ್ಯೆ ಇದ್ದಿರಬಹುದು ಆದರೆ ನೆರೆಹೊರೆಯವರೊಂದಿಗೆ ರೋಗಿಗಳಿಗೆ ಒಳ್ಳೆಯ ಮತ್ತು ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು ಕೆಲವೊಮ್ಮೆ ಕೋಪಗೊಳ್ಳುತ್ತಿದ್ದರು ಖಿನ್ನತೆಗೆ ಒಳಗಾಗುತ್ತಿದ್ದರು ಇದೇ ಖಿನ್ನತೆಯಿಂದ ಈ ರೀತಿಯ ಕೃತ್ಯ ಎಸಗಿರಲು ಬಹುದು ಎಂದು ಸ್ಥಳೀಯರು ಹೇಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu