-->

ಪೆರುಗ್ವೆ ವಿವಿಯಲ್ಲಿ ಬಂದೂಕುಧಾರಿಯ ಗುಂಡಿನ ದಾಳಿಗೆ 15ಮಂದಿ ಬಲಿ

ಪೆರುಗ್ವೆ ವಿವಿಯಲ್ಲಿ ಬಂದೂಕುಧಾರಿಯ ಗುಂಡಿನ ದಾಳಿಗೆ 15ಮಂದಿ ಬಲಿ


ನವದೆಹಲಿ: ಪೆರುಗ್ವೆಯ ಚಾರ್ಲ್ಸ್​​ ವಿಶ್ವವಿದ್ಯಾಲಯದಲ್ಲಿ ಬಂದೂಕುಧಾರಿಯೊಬ್ಬ ನಡೆಸಿರುವ ಗುಂಡಿನ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೆಕ್ ಗಣರಾಜ್ಯದ ಅತ್ಯಂತ ಕರಾಳ ಎನಿಸಿರುವ ಈ ಘಟನೆಯ ರೂವಾರಿ ಬಂದೂಕುಧಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಜೆಕ್ ಪೊಲೀಸರು, ಜನ್ ಪಲಾಚ್ ಚೌಕ್​ನಲ್ಲಿರುವ ಚಾರ್ಲ್ಸ್ ವಿಶ್ವವಿದ್ಯಾಲಯದಲ್ಲಿ ಈ ಗುಂಡಿನ ದಾಳಿ ನಡೆದಿದೆ. ಬಂದೂಕುಧಾರಿ ಕಟ್ಟಡದಲ್ಲೇ ಇದ್ದಾನೆ. ಯಾರು ಕೂಡ ತಮ್ಮ ಕೊಠಡಿಯಿಂದ ಹೊರಬರಬೇಡಿ ಎಂದು ಕಲಾ ವಿಭಾಗದ ಬೋಧಕರಿಗೆ ಇಮೇಲ್​ ರವಾನೆಯಾಗಿತ್ತು.

ಬಂದೂಕುಧಾರಿ ಮೊದಲಿಗೆ ತನ್ನ ತಂದೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ವಿಶ್ವವಿದ್ಯಾಲಯದಲ್ಲಿ15 ಮಂದಿಯನ್ನು ಹತ್ಯೆ ಮಾಡಿದ್ದಾನೆ. ಆರೋಪಿ ಗುಂಡು ಹಾರಿಸಿಕೊಂಡು ಸತ್ತಿದ್ದಾನೆಯೇ ಅಥವಾ ಆತನನ್ನು ಅಧಿಕಾರಿಗಳು ಹತ್ಯೆ ಮಾಡಿದ್ದಾರೆಯೇ ಎಂಬುದರ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ವಿಶ್ವವಿದ್ಯಾಲಯದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಮೂಲಕ ಜೆಕ್ ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article