ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ವಿದ್ಯಾರ್ಥಿಗೆ ಹಲ್ಲೆನಡೆಸಿ ಕೈಬೆರಳು ಕತ್ತರಿಸಿದ ಹಿರಿಯ ವಿದ್ಯಾರ್ಥಿ

ಹೊಸದಿಲ್ಲಿ: ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ್ದಕ್ಕೆ 12ನೇ ತರಗತಿ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿಯು ಹಲ್ಲೆ ನಡೆಸಿ, ಆತನ ಬೆರಳು ಕತ್ತರಿಸಿರುವ ಆತಂಕಕಾರಿ ಘಟನೆ ದಿಲ್ಲಿಯ ದ್ವಾರಕಾ ದಕ್ಷಿಣದಲ್ಲಿ ನಡೆದಿದೆ ಎಂದು ತಡವಾಗಿ ಬೆಳಕಿಗೆ ಬಂದಿದೆ‌.

ಈ ಘಟನೆ ಅ.21ರಂದು ನಡೆದಿದ್ದು, ಆದರೆ ವಿದ್ಯಾರ್ಥಿ ಎಲ್ಲೂ ಬಾಯಿಬಿಡದ ಕಾರಣ ತಡವಾಗಿ ಬೆಳಕಿಗೆ ಬಂದಿದೆ.

ಕೈಬೆರಳು ಕತ್ತರಿಸಿಕೊಂಡ ವಿದ್ಯಾರ್ಥಿ ತೀವ್ರ ಭೀತಿಗೊಂಡಿದ್ದ. ಆದ್ದರಿಂದ ಆತ ಹಿರಿಯ ವಿದ್ಯಾರ್ಥಿ ತನ್ನ ಮೇಲೆ ನಡೆದಿರುವ ಹಲ್ಲೆಯನ್ನು ಪೋಷಕರಿಗೆ ತಿಳಿಸಿರಲಿಲ್ಲ. ಮೋಟಾರು ಸೈಕಲ್ ಚೈನ್ ದೆಸೆಯಿಂದ ತನ್ನ ಕೈಬೆರಳು ತುಂಡಾಗಿದೆ ಎಂದು ಆತ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ವಿದ್ಯಾರ್ಥಿ ನಡೆದಿದ್ದ ಘಟನೆಯನ್ನು ಶುಕ್ರವಾರ ಬಹಿರಂಗಪಡಿಸಿದ ಬಳಿಕ ಆತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.