-->
1000938341
ಬೆಳ್ತಂಗಡಿ: ಪತ್ನಿಯನ್ನು ಕೊಲೆಗೈದು ಬಾವಿಗೆ ತಳ್ಳಿ ಕೊಲೆಗೈದ ಪತಿ - ಆತ್ಮಹತ್ಯೆಯ ನಾಟಕ

ಬೆಳ್ತಂಗಡಿ: ಪತ್ನಿಯನ್ನು ಕೊಲೆಗೈದು ಬಾವಿಗೆ ತಳ್ಳಿ ಕೊಲೆಗೈದ ಪತಿ - ಆತ್ಮಹತ್ಯೆಯ ನಾಟಕ

ಬೆಳ್ತಂಗಡಿ: ಪತಿಯೇ ಪತ್ನಿಯನ್ನು ಕತ್ತು ಹಿಸುಕಿ ಬಾವಿಗೆ ತಳ್ಳಿ ಕೊಲೆಗೈದು ಬಳಿಕ ಆತ್ಮಹತ್ಯೆ ನಾಟಕವಾಡಿರುವ ಪ್ರಕರಣ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆಂಪನೊಟ್ಟು ಎಂಬಲ್ಲಿ ಬೆಳಕಿಗೆ ಬಂದಿದೆ.

ಶಶಿಕಲಾ(27) ಮೃತಪಟ್ಟ ಮಹಿಳೆ.‌ ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ಪತಿ ಸುಧಾಕರ ನಾಯ್ಕನನ್ನು ಬಂಧಿಸಿದ್ದಾರೆ.

ಶಶಿಕಲಾ ಹಾಗೂ ಸುಧಾಕರ ನಾಯ್ಕ ಏಳು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಆರು ವರ್ಷದ ಪುತ್ರಿಯೂ ಇದ್ದಾಳೆ. ಈ ನಡುವೆ, ಸುಧಾಕರನಿಗೆ ಬೇರೊಬ್ಬಳು ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ದಂಪತಿ ನಡುವೆ ಜಗಳ ಉಂಟಾಗಿತ್ತು. ಇದೇ ವಿಚಾರದಲ್ಲಿ ಶಶಿಕಲಾ ಮನೆಯವರು ಬಂದು ಸಮಾಧಾನ, ರಾಜಿ ಪಂಚಾತಿಕೆ ಮಾಡಿ ಹೋಗುತ್ತಿದ್ದರು. 

ನ.3ರಂದು ಮತ್ತೆ ದಂಪತಿ ನಡುವೆ ಅನೈತಿಕ ಸಂಬಂಧ ವಿಚಾರಕ್ಕೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಸುಧಾಕರ ಪತ್ನಿ ಶಶಿಕಲಾ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾನೆ. ಪ್ರಜ್ಞೆ ತಪ್ಪಿ ಬಿದ್ದ ಪತ್ನಿಯನ್ನು ಮನೆಯಂಗಳದ ಬಾವಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ಶಶಿಕಲಾ ಅವರ ಸೋದರ ಶಶಿಧರ್ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಆರೋಪಿ ಸುಧಾಕರ, ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿ ನಾಟಕ ಮಾಡಿದ್ದು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ.

Ads on article

Advertise in articles 1

advertising articles 2

Advertise under the article