ಸ್ಪೀಕರ್ ಸ್ಥಾನ ಮಸೀದಿ ಮೌಲ್ವಿ ಹುದ್ದೆಯಲ್ಲ: ಸಿ ಟಿ ರವಿ


ಉಡುಪಿ: 'ಸ್ಪೀಕರ್  ಸ್ಥಾನ ಸಾಂವಿಧಾನಿಕ ಹುದ್ದೆ. ಅದು ಮಸೀದಿಯ ಮೌಲ್ವಿಯ ಹುದ್ದೆಯಲ್ಲ. ನಾವು ಮುಲ್ಲಾಗೆ ಸಲಾಂ ಹೊಡೆಯುತ್ತಿಲ್ಲ' ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದ್ದಾರೆ.


ಸಚಿವ ಜಮೀರ್ ಹೇಳಿಕೆಗೆ ಉಡುಪಿಯಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, 'ಸ್ಪೀಕರ್ ಹುದ್ದೆಗೆ ಸಿಗುವ ಗೌರವ ಜಾಮಿಯಾ ಮಸೀದಿಯ ಮುಲ್ಲಾನಿಗೆ ಸಿಗುವ ಗೌರವ ಅಲ್ಲ. ಬಿಜೆಪಿಯವರು ಮೌಲ್ವಿಗೆ ಜೀ ಹುಜೂರ್ ಎನ್ನುತ್ತಿಲ್ಲ. ಆ ಹುದ್ದೆಯ ಗೌರವ ಕೆಳಗೆ ಇಳಿಸುವ ಕೆಲಸ ಮಾಡಬೇಡಿ' ಎಂದರು.

ಸಂವಿಧಾನ ಅರ್ಥ ಆಗದ ನಿಮ್ಮಂತವರು ಸಚಿವರಾದರೆ ಹೀಗೆಯೇ ಆಗುವುದು. ಸ್ಪೀಕರ್  ಯು.ಟಿ.ಖಾದರ್ ಅವರ ಘನತೆಯನ್ನು ಹಾಳು ಮಾಡಬೇಡಿ' ಎಂದರು

BREAKING NEWS
Loading latest news...
Join our WhatsApp Channel Powered By : Online Pudu