ಕರೆ ಮಾಡಿದರೂ ಸೋಮಣ್ಣ ಸ್ವೀಕರಿಸಿಲ್ಲ! - ಯಡಿಯೂರಪ್ಪ
Sunday, November 26, 2023
ಬೆಂಗಳೂರು: ಸೋಮಣ್ಣ ಅವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಮುಂದಿನ ದಿನಗಳಲ್ಲಿ ಅವರ ಜತೆ ಮಾತನಾಡುತ್ತೇನೆ. ಅವರು ಪಕ್ಷ ಬಿಡುವ ಚಿಂತನೆಯಲ್ಲಿಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸಿದ್ದಗಂಗಾ ಮಠದಲ್ಲಿ ಶ್ರೀಗಳ ಜತೆ ಸೋಮಣ್ಣ ಮಾತನಾಡಿರುವುದನ್ನು ಗಮನಿಸಿದ್ದೇನೆ. ಬರುವ ದಿನಗಳಲ್ಲಿ ಎಲ್ಲವೂ ಇತ್ಯರ್ಥವಾಗಲಿದೆ. ಸೋಮಣ್ಣ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲಾಗುವುದು. ಅವರು ಪಕ್ಷ ಬಿಟ್ಟು ಹೋಗುವುದಿಲ್ಲ. ಏನೇ ಸಮಸ್ಯೆಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಅವರ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಅಲ್ಲದೆ ನಮ್ಮ ಮನೆಗೆ ವಿಜಯೇಂದ್ರ ಬರುವುದು ಬೇಕಿಲ್ಲ ಎಂದಿರುವ ಯತ್ನಾಳ್ ಮನೆಗೆ ಹೋಗುತ್ತೇನೆ ಎಂದವರು ಯಾರು ಎಂದು ಪ್ರಶ್ನಿಸಿದರು.