ಮೂಡುಬಿದರೆ: ರಾಯಲ್ ಎನ್ ಫೀಲ್ಡ್ ಬೈಕ್ ಕಳವು - ಇಬ್ಬರು ಅರೆಸ್ಟ್

ಮೂಡುಬಿದಿರೆ: ರಾಯಲ್ ಎನ್ ಫೀಲ್ಡ್ ಬೈಕ್ ಕಳವುಗೈದ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ಮೂಡುಬಿದಿರೆಯ ಇದಾ ಕೋಟೆಬಾಗಿಲು ನಿವಾಸಿಗಳಾದ ಸಯ್ಯದ್  ಝಾಕೀ‌ರ್(20), ಮೊಹಮ್ಮದ್ ಶಾಹೀಮ್(24) ಬಂಧಿತ ಆರೋಪಿಗಳು.


ಅಕ್ಟೋಬರ್ 7ರಂದು ಮುಂಜಾನೆ ಖಚಿತ ಮಾಹಿತಿ ಮೇರೆಗೆ ಮೂಡಬಿದಿರೆ ಪೊಲೀಸ್ ನಿರೀಕ್ಷಕರು ಸಿಬ್ಬಂದಿಯೊಂದಿಗೆ ಮಾರ್ಪಾಡಿ ಗ್ರಾಮದ ಸಾವಿರ ಕಂಬದ ಬಸದಿಯ ಬಳಿ ಇರುವ ಕೊಂಡೆ ಸ್ಟ್ರೀಟ್ ನಲ್ಲಿ ಇಬ್ಬರು ಯುವಕರು ಹಾಗೂ ಅವರಲ್ಲಿದ್ದ ನಂಬ್ರ ಪ್ಲೇಟ್ ಇಲ್ಲದ Royal Enfield Classic 350 ಬೈಕ್ ಅನ್ನು ಸಮೇತ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಬೈಕ್ ಅನ್ನು ಆರೋಪಿಗಳು ಅಕ್ಟೋಬರ್ 24 ರಂದು ಮಧ್ಯರಾತ್ರಿ ಮೂಡಬಿದಿರೆಯ ಜೈನ್ ಪೇಟೆಯ ಬಡಗ ಬಸದಿ ಮುಂಭಾಗ ಇರುವ ದೇವಿ ಕೃಪಾ ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಏರಿಯಾದಿಂದ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ‌. 


ಅಲ್ಲದೆ ಮಾರ್ಪಾಡಿ ಗ್ರಾಮದ ಎವರ್ ಪ್ರೈಸ್ ರೆಸಿಡೆನ್ಸ್, ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಮತ್ತೊಂದು ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಕಳವು ಮಾಡಿ ಪೇಪರ್ ಮಿಲ್ ಬಳಿ ಇರುವ ಕೀರ್ತಿ ನಗರ ಕ್ರಾಸ್‌ ಬಳಿ ಪೊದೆಗಳ ಮಧ್ಯೆ ಬಚ್ಚಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಸ್ವಾಧೀನಪಡಿಸಿಕೊಂಡ ಬೈಕ್ ಗಳ ಮೌಲ್ಯ 3,00,000 ರೂ‌. ಆಗಿರಬಹುದೆಂದು ಅಂದಾಜಿಸಲಾಗಿದೆ.